Advertisements

ಸೋಷಿಯಲ್ ಮೀಡಿಯಾದಲ್ಲಿ ಬರೆಯುವ ಮುನ್ನ ಸಾವಿರ ಸಲ ಯೋಚಿಸಿ

ಸಾಮಾಜಿಕ ಜಾಲತಾಣ ಅನ್ನುವುದು ಇದೀಗ ಕೊಚ್ಚೆ ಗುಂಡಿಯಾಗಿದೆ. ಮೊದ ಮೊದಲು ಸದುಪಯೋಗ ಅನ್ನಿಸುತ್ತಿತ್ತು. ಆದರೆ ಇದೀಗ ದುರುಪಯೋಗ ಹೆಚ್ಚಾಗಿದೆ.ಟ್ರೋಲ್ ಹೆಸರಿನಲ್ಲಿ ತೇಜೋವಧೆ ನಡೆಯುತ್ತಿದೆ.

ಅದರಲ್ಲೂ ರಾಜಕೀಯ ವ್ಯಕ್ತಿಗಳನ್ನು ಹಿಗ್ಗಾ ಮುಗ್ಗಾ ಜಾಡಿಸಲಾಗುತ್ತಿದೆ. ಟೀಕಿಸುವ ಭರಾಟೆಯಲ್ಲಿ ಎಲ್ಲೆ ಮೀರುತ್ತಿರುವುದೇ ಅಪಾಯಕಾರಿ.

ಹೀಗೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಟೀಕಿಸಿದ ಕುಡ್ಲ ಟ್ರೋಲ್ ಪೇಜ್ ಆಡ್ಮಿನ್ ಪೊಲೀಸರ ಅತಿಥಿಯಾಗಿದ್ದಾನೆ.
ಅವಹೇಳನಕಾರಿ ಬರಹ ಪೋಸ್ಟ್  ಹಾಕಿದ ಕರ್ಮಕ್ಕೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಾರತೀಯ ಅಪರಾಧ ಕಾಯ್ದೆ  ಸೆಕ್ಷನ್ 153 ಮತ್ತು 504 ರ ಅಡಿಯಲ್ಲಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜಕೀಯ ವ್ಯಕ್ತಿಗಳನ್ನು ಟೀಕಿಸುವ ಅಧಿಕಾರ ಎಲ್ಲರಿಗಿದೆ. ಹಾಗಂತ ಅದಕ್ಕೊಂದು ಇತಿಮಿತಿ ಬೇಕು ತಾನೇ. ಕುಮಾರಸ್ವಾಮಿ ತಪ್ಪು ಮಾಡಿದಾಗ ಅದನ್ನು ಬರೆಯುವ ಹಕ್ಕು ಖಂಡಿತಾ ಇದೆ. ಆದರೆ ಅದು ವೈಯುಕ್ತಿಕ ನಿಂದನೆಯಾಗಬಾರದು. ರಾಜ್ಯದ ಮುಖ್ಯಮಂತ್ರಿಯ ಕಣ್ಣು ತೆರೆಸುವಂತಿರಬೇಕು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಳೆದ ತಿಂಗಳು ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಆಗ್ರಾ ಪೊಲೀಸರು ಬಂಧಿಸಿದ್ದರು.

ಈ ಎರಡೂ ಪ್ರಕರಣಗಳು ಕಾರಣವಿಲ್ಲದೆ ನಿಂದಿಸುವ ಮಂದಿಗೆ ಪಾಠವಾಗಲಿ.

Advertisements

Leave a Reply

%d bloggers like this: