Advertisements

ಸಾವಿನ ಮನೆಯ ಹೆಬ್ಬಾಗಿಲಿಗೆ ರಹದಾರಿ ಈ ಡ್ರ್ಯಾಗನ್ಸ್​ ಬ್ರೀಥ್

ಈ ಸಾಮಾಜಿಕ ಜಾಲತಾಣದ ಚಾಲೆಂಜ್ ಗಳು ಒಳಿತು ಮಾಡುವುದಕ್ಕಿಂತ ಕೆಡುಕು ಮಾಡಿದ್ದು ಹೆಚ್ಚು.

ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಕಿಕಿ ಡ್ಯಾನ್ಸ್​ ಚಾಲೆಂಜ್ ಪ್ರಾಣಕ್ಕೆ ಕಂಟಕವಾದ ಬೆನ್ನಲ್ಲೇ ಮತ್ತೊಂದು ಅಪಾಯಕಾರಿ ಚಾಲೆಂಜ್ ಸದ್ದು ಮಾಡಲಾರಂಭಿಸಿದೆ.

ಡ್ರ್ಯಾಗನ್ಸ್​ ಬ್ರೀಥ್​ ಹೆಸರಿನ ಈ ಚಾಲೆಂಜ್ ನೋಡುವುದಕ್ಕೆ ಮಜಾವಾಗಿದೆ. ಇದರ ಅಪಾಯವನ್ನು ಮಾತ್ರ ಊಹಿಸಲು ಅಸಾಧ್ಯ.

ಡ್ರ್ಯಾಗನ್ಸ್​ ಬ್ರೀಥ್​ ಎಂಬ ವಿಚಿತ್ರ ಚಾಲೆಂಜ್ ಸ್ವೀಕರಿಸಿದ ಮಂದಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

dragon breath

ಏನಿದು ಡ್ರ್ಯಾಗನ್ಸ್​ ಬ್ರೀಥ್…?

 ಸ್ವೀಟ್​, ಮಿಠಾಯಿ ಮತ್ತಿತರ ತಿನಿಸುಗಳನ್ನು ದ್ರವರೂಪದ ಸಾರಜನಕದಲ್ಲಿ ಅದ್ದಿ ತಿಂದು, ನಂತರ ಈ ವೇಳೆ ಬರುವ ಹೊಗೆಯನ್ನು ಮೂಗು ಅಥವಾ ಬಾಯಿಯ ಮೂಲಕ ಹೊರಹಾಕಿದರೆ ಅದು ಡ್ರ್ಯಾಗನ್ಸ್​ ಬ್ರೀಥ್​ ಎನಿಸಿಕೊಳ್ಳುತ್ತದೆ.

dragon breath 1

ವಿದೇಶದಲ್ಲಿ ಪ್ರಾರಂಭವಾಗಿರುವ ಚಾಲೆಂಜ್ ಕರ್ನಾಟಕಕ್ಕೆ ಬರುವ ದಿನಗಳು ದೂರವಿಲ್ಲ. ಯಾಕೆಂದರೆ ನೈಟ್ರೋಜನ್ ನಲ್ಲಿ ಅದ್ದಿ ಆಹಾರ ಮಾರಾಟ ಮಾಡುವ ಮಳಿಗೆಗಳು ರಾಜ್ಯದಲ್ಲಿ ನೂರಾರಿವೆ. ಇದನ್ನು ತಿನ್ನುವ ಮಂದಿಯೂ ಸಾಕಷ್ಟಿದ್ದಾರೆ. ಆದರೆ ಅಪಾಯದ ಅರಿವು ಮಾತ್ರ ಯಾರಿಗೂ ಇಲ್ಲ.

ನೈಟ್ರೋಜನ್​ನಲ್ಲಿ ಅದ್ದಿ ತೆಗೆದ ಆಹಾರ ಅತಿಯಾದ ತಂಪಿನಿಂದ ಕೂಡಿರುತ್ತವೆ. ನಾಲಗೆ ಮತ್ತು ಆಂತರಿಕ ಅಂಗಗಳನ್ನು ಕರಗಿಸುವಷ್ಟು ಪ್ರಬಲವಾಗಿರುತ್ತದೆ ಈ ನೈಟ್ರೋಜನ್ ಅನ್ನುವುದು ಹಲವಾರು ಮಂದಿಗೆ ಗೊತ್ತಿಲ್ಲ.

ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​….

ಈಗಾಗಲೇ ವಿದೇಶದಲ್ಲಿ ಚಾಲೆಂಜ್ ಸ್ವೀಕರಿಸಲು ಹೋದ ಹಲವಾರು ಮಂದಿ ಆಸ್ಪತ್ರೆಗೆ ಸೇರಿದ್ದಾರೆ.

ಡ್ರ್ಯಾಗನ್ಸ್​ ಬ್ರೀಥ್ ಅಪಾಯ ಹೇಗೆ ಅಪಾಯ ಅನ್ನುವುದನ್ನು ತಿಳಿಸುವ ಎರಡು ವಿಡಿಯೋಗಳು ಇಲ್ಲಿದೆ.

Know why Dragon’s breath challenge is deadly

Is Dragon’s Breath Snack Safe to Eat?

Advertisements

Leave a Reply

%d bloggers like this: