Advertisements

ರೈತರ ತೋಟದ ರಕ್ಷಣೆಗೆ ಬಂದು ಬಿಯರ್ ಬಾಟಲಿ ಪಡೆ

ತಾವು ಬೆಳೆದ ಬೆಳೆಯ ರಕ್ಷಣೆಗೆ ಸೂಕ್ತ ಬೆಲೆಗಾಗಿ ಪರದಾಡುವ ರೈತನ ಪಾಲಿಗೆ ಪ್ರಾಣಿಗಳೇ ದೊಡ್ಡ ಶತ್ರು. ಫಸಲು ಇನ್ನೇನು ಕೈಗೆ ಬರಬೇಕು ಅನ್ನುವಷ್ಟರಲ್ಲಿ ಎಕರೆಗಟ್ಟಲೆ ಬೆಲೆಯನ್ನು ಪ್ರಾಣಿಗಳು ನಾಶ ಮಾಡಿಬಿಡುತ್ತದೆ.

ರೈತರ ಶ್ರೀಮಂತನಾಗಿದ್ದರೆ ಸೋಲಾರ್ ತಂತಿ ಸೇರಿದಂತೆ ದುಬಾರಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಬಡ ರೈತ ಏನು ಮಾಡಲು ಸಾಧ್ಯ

ಹೀಗಾಗಿ ರೈತರೇ ವಿಜ್ಞಾನಿಗಳಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರತಾರೆಯ ಫೋಟೋ ಹಾಕಿ ದೃಷ್ಟಿ ತಾಕದಂತೆ ಮಾಡಿದ್ದುಸುದ್ದಿಯಾಗಿತ್ತು.

ಇದೀಗ ಸಂಶೋಧನೆ ಸರದಿ ಗದಗ ರೈತರದ್ದು.

ಗದಗ ಜಿಲ್ಲೆಯ ಗಜೇಂದ್ರಗಡ, ನರೇಗಲ್ ಭಾಗದಲ್ಲಿ ಜಿಂಕೆ ಹಾವಳಿ ಹೆಚ್ಚಾಗಿದ್ದು, ರೈತರ ತಲೆ ಕಾಣದಿದ್ದರೆ ತೋಟಕ್ಕೆ ನುಗ್ಗುವ ಜಿಂಕೆಗಳನ್ನು ಪೈರು ನಾಶ ಮಾಡುತ್ತಿದೆ. ಒಂದು ಕಡೆಯಿಂದ ಓಡಿಸಿದರೆ, ಮತ್ತೊಂದು ಕಡೆ ಎಂಟ್ರಿ ಹೊಡೆಯುತ್ತದೆ.

ಹೀಗಾಗಿ ಬೆಳೆ ರಕ್ಷಣೆಗೆ ರೈತರು ಬಿಯರ್ ಬಾಟಲ್​ಗಳ ಮೊರೆ ಹೋಗಿದ್ದಾರೆ. ಹೊಲಗದ್ದೆಗಳಲ್ಲಿ ಜೋಡಿ ಬಿಯರ್ ಬಾಟಲಿ​ಗಳನ್ನು ತೂಗಿ ಹಾಕುವ ರೈತರು ವನ್ಯ ಪ್ರಾಣಿಗಳ ದಾಳಿ ತಡೆಯುತ್ತಿದ್ದಾರೆ.

beer bottle
ತೋಟದ ರಕ್ಷಣೆಗೆ ಬಿಯರ್ ಬಾಟಲಿ

 ಹೊಲ ಗದ್ದೆಗಳ ಕಂಬ ಹಾಗೂ ಗಿಡ ಮರಗಳಿಗೆ ಬಿಯರ್ ಬಾಟಲಿಗೆ ಜೋಡಿ ಬಿಯರ್ ಬಾಟಲಿ ನೇತು ಹಾಕಲಾಗುತ್ತದೆ. ಇದರಿಂದ ಗಾಳಿ ಬಂದಾಗ ಬಾಟಲಿಗಳ ​ ಶಬ್ದಕ್ಕೆ ಹೆದರಿ ಜಿಂಕೆಗಳು ಹೊಲಗದ್ದೆಗಳತ್ತೆ ಸುಳಿಯುತ್ತಿಲ್ಲ.

Advertisements

Leave a Reply

%d bloggers like this: