Advertisements

SSLC ವಿದ್ಯಾರ್ಥಿಯೊಂದಿಗೆ ಪರಾರಿಯಾದ 29ರ ಹರೆಯದ ಶಿಕ್ಷಕಿ

ಗುರುವನ್ನು ದೇವರಿಗೆ ಸಮಾನವಾಗಿ ನೋಡು ಅಂತಾರೆ. ಆದರೆ ಚಂಢೀಗಡದಲ್ಲಿ ಶಿಕ್ಷಕಿಯೊಬ್ಬಳು ಮಾಡಿದ ಕೆಲಸ ಇಡೀ ಶಿಕ್ಷಕ ವರ್ಗ ತಲೆ ತಗ್ಗಿಸುವಂತೆ ಮಾಡಿದೆ.

ಫತೇಹಾಬಾದಿನ ಖಾಸಗಿ ಶಾಲೆಯೊಂದರ 15 ವರ್ಷದ ಬಾಲಕನ ಮತ್ತು 29 ವರ್ಷದ ಶಿಕ್ಷಕಿ ಕಳೆದ ತಿಂಗಳ 20ರಂದು ನಾಪತ್ತೆಯಾಗಿದ್ದರು. ಶಾಲೆಯ ಶಿಕ್ಷಕಿ ಮತ್ತು ವಿದ್ಯಾರ್ಥಿ ನಾಪತ್ತೆಯಾಗಿರು ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಎರಡು ಕುಟುಂಬದವರನ್ನು ಶಾಲೆಗೆ ಕರೆಸಿಕೊಂಡ ಶಾಲಾ ಮುಖ್ಯಸ್ಥರು ಈ ಕುರಿತು ಮಾಹಿತಿ ನೀಡಿದ್ದಾರೆ.

ತಕ್ಷಣ ಮಗ ನಾಪತ್ತೆಯಾಗಿದ್ದಾನೆ ಎಂದು ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಶಿಕ್ಷಕಿಯೇ ಮಗನನ್ನು ಅಪಹರಿಸಿದ್ದಾನೆ ಎಂದು ಲಿಖಿತ ದೂರು ಕೊಟ್ಟ ಹಿನ್ನಲೆಯಲ್ಲಿ ಶಿಕ್ಷಕಿ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಪ್ರಾರಂಭಿಸಿದರು.

ಮೊದಲಿಗೆ ಪೊಲೀಸರು ಕಣ್ಣು ಹಾಕಿದ್ದು ಇವರಿಬ್ಬರ ಫೋನ್ ಕಡೆಗೆ, ಪರಿಶೀಲನೆ ನಡೆಸಿದಾಗ ಇವರಿಬ್ಬರು ಪರಸ್ಪರ ನಂಬರ್ ಬದಲಾಯಿಸಿದ್ದು, ಸತತವಾಗಿ ಸಂಪರ್ಕದಲ್ಲಿದ್ದರು ಎಂದು ಗೊತ್ತಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಇವರಿಬ್ಬರು ಸಂಪರ್ಕ ಹೊಂದಿದ್ದರು.

ಬಳಿಕ ಫತೇಹಾಬಾದಿನಲ್ಲೇ ಜುಲೈ 24 ರಂದು ವಿದ್ಯಾರ್ಥಿ ಮತ್ತು ಶಿಕ್ಷಕಿಯನ್ನು ಬಂಧಿಸಿದ್ದಾರೆ. ಕೋರ್ಟ್ ಶಿಕ್ಷಕಿಯನ್ನು ಜೈಲಿಗೆ ಕಳುಹಿಸಿದ್ದು, ಈಕೆ ಹೀಗ್ಯಾಕೆ ಮಾಡಿದಳು. ಪೋಷಕರ ದೂರಿನಂತೆ ಕೊಲೆ ಮಾಡುವ ಉದ್ದೇಶವಿತ್ತಾ, ಅಥವಾ ಅವರಿಬ್ಬರ ನಡುವೆ ಬೇರೆ ಸಂಬಂಧವಿತ್ತಾ ಅನ್ನುವ ಕುರಿತಂತೆ ತನಿಖೆ ನಡೆಯುತ್ತಿದೆ.

ಬಾಲಕನನ್ನು ತನ್ನೊಂದಿಗೆ ಕರೆದೊಯ್ದಿದ್ದನ್ನು ಶಿಕ್ಷಕಿ ಒಪ್ಪಿಕೊಂಡಿದ್ದು, ಅವರಿಬ್ಬರ ವೈದ್ಯಕೀಯ ಪರೀಕ್ಷೆ ಬಳಿಕವಷ್ಟೇ ಶಿಕ್ಷಕಿ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾಳೆಯೋ, ಇಲ್ಲವೋ ಎಂಬುದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯಿಂದ ನಾಪತ್ತೆಯಾದ ಇವರಿಬ್ಬರು ಮೊದಲು ಹಿಸ್ಸಾರ್ ಗೆ ಹೋಗಿದ್ದಾರೆ. ಅಲ್ಲಿಂದ ದೆಹಲಿಗೆ ಪ್ರಯಾಮಿಸಿದ್ದಾರೆ ಅಲ್ಲಿಂದ ಜಮ್ಮು ಕಾಶ್ಮೀರದ ಕಡೆಗೆ ಹೋಗಿದ್ದರು. ನಂತರ ಫತೇಹಾಬಾದ್ ಕಡೆಗೆ ಬಂದಿದ್ದಾರೆ ಎಂದು

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಸುರೇಂದ್ರ ಕುಮಾರ್ ತಿಳಿಸಿದ್ದಾರೆ.

Advertisements

One Comment on “SSLC ವಿದ್ಯಾರ್ಥಿಯೊಂದಿಗೆ ಪರಾರಿಯಾದ 29ರ ಹರೆಯದ ಶಿಕ್ಷಕಿ

  1. Pingback: ಪುನೀತ್ ಕೈಯಲ್ಲಿ ಕಪ್ಪು ದಾರ ಯಾಕೆ ಬಂತು…?

Leave a Reply

%d bloggers like this: