Advertisements

ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ

ಕಿರಿಕ್ ಪಾರ್ಟಿಯ ಸುಂದರಿ, ರಕ್ಷಿತ್ ಶೆಟ್ಟಿ ಮನದನ್ನೆ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಅದ್ದೂರಿಯಾಗಿ ಬಿಡುಗಡೆಯಾಯಿತು.

ಈ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಹ ಬಂದಿದ್ದರು.ಕಾರ್ಯಕ್ರಮದ ವೇಳೆ ಅಲ್ಲಿದ್ದ ಅಭಿಮಾನಿಗಳು ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ ಅವರು ಸ್ಟೇಜ್ ಮೇಲೆ ಬರಬೇಕೆಂದು ಕೂಗಾಟ ಪ್ರಾರಂಭಿಸಿದ್ದರು.

ಈ ವೇಳೆ ವೇದಿಕೆ ಮೇಲೆ ಬಂದ ರಶ್ಮಿಕಾ ನನಗೆ ಗೊತ್ತು ಅಲ್ಲು ಸರ್ ಸ್ಟೇಜ್ ಮೇಲೆ ಬರಬೇಕೆಂದು ಬಯಸುತ್ತಿದ್ದೀರಿ. ಆದರೆ, ಅದಕ್ಕೂ ಮುಂಚೆ ಎರಡು ನಿಮಿಷ ನಾನು ಮಾತನಾಡುತ್ತೇನೆ. ಒಂದು ವೇಳೆ ನೀವು ಹೀಗೆ ಚೀರಾಡಿದರೆ ಆ್ಯಸಿಡ್ ತಂದು ನಿಮ್ಮ ಮುಖದ ಮೇಲೆ ಹಾಕ್ತೀನಿ, ಮೊದಲು ನನಗೆ ಮಾತಾಡೋಕೆ ಬಿಡಿ ಎಂದು ಕೂಲಾಗಿ ಆವಾಜ್ ಹಾಕಿದರು.

ರಶ್ಮಿಕಾ ಆವಾಜ್ ಗೆ ಅಭಿಮಾನಿಗಳು ಫುಲ್ ಸೈಲೆಂಟ್ ಆಗಿದ್ದಾರೆ.

ರಶ್ಮಿಕಾ ಹೀಗೆ ಹೇಳುತ್ತಿದ್ದರೆ, ಕೆಳಗೆ ಕೂತಿದ್ದ ಅಲ್ಲು ಅರ್ಜುನ್ ಮುದ್ದು ಮುಖದ ಚೆಲುವೆಯ ಮಾತು ಕೇಳಿ ನಕ್ಕು ಸುಮ್ಮನಾದರು.
ಇದೀಗ ರಶ್ಮಿಕಾ ಮಾತು ವೈರಲ್ ಆಗಿದ್ದು, ಅಭಿಮಾನಿಗಳು ಕೂಲಾಗಿ ಶೇರ್ ಮಾಡುತ್ತಿದ್ದಾರೆ.

allu-arjun-vijay-rashmika

Advertisements

One Comment on “ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ

  1. Pingback: ರಶ್ಮಿಕಾ V/S ಅಭಿಮಾನಿಗಳು –  ಅತೀಯಾದ ರೋಮಾನ್ಸ್ ಅಪಾಯಕಾರಿ

Leave a Reply

%d bloggers like this: