ಮಂಡ್ಯಕ್ಕೆ ಪ್ರಜ್ವಲ್…ಮತ್ತೆ ದೇವೇಗೌಡರು..?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು, ತಂದೆಯೊಂದಿಗೆ ವಿಧಾನಸಭೆ ಪ್ರವೇಶಿಸಬೇಕು ಎಂದು ಕನಸು ಕಂಡಿದ್ದ ಪ್ರಜ್ವಲ್ ರೇವಣ್ಣ ಹಿನ್ನಡೆ ಅನುಭವಿಸಿದ್ದರು.

ಆದರೆ ಆ ವೇಳೆ ಮೊಮ್ಮಗನನ್ನು ಲೋಕಸಭೆಗೆ ಕಳುಹಿಸುವ ಭರವಸೆಯನ್ನು ದೇವೇಗೌಡರು ಕೊಟ್ಟಿದ್ದರು. ಹಾಸನಕ್ಕೆ ಮೊಮ್ಮಗನೇ ಉತ್ತರಾಧಿಕಾರಿ ಅನ್ನುವುದು ಮಾಜಿ ಪ್ರಧಾನಿಗಳ ಮಾತಾಗಿತ್ತು.

ಆದರೆ ಇದೀಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ನ ಬದ್ಧ ವೈರಿಯಾಗಿದ್ದ ಕಾಂಗ್ರೆಸ್ ಜೊತೆ ಹೊಂದಾಣಿಕೆ ಸರ್ಕಾರ ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಮೋದಿಯನ್ನು ಸೋಲಿಸಲು ತೃತೀಯ ರಂಗ ರಚನೆಯಾಗುತ್ತಿದೆ.

ಹೀಗಾಗಿ ದೇವೇಗೌಡರು ಮತ್ತೆ ಲೋಕಸಭೆಗೆ ಬರಬೇಕು ಅನ್ನುವ ಇಚ್ಛೆಯನ್ನು ತೃತೀಯ ರಂಗದ ನಾಯಕರು ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಮತ್ತೆ ಚುನಾವಣೆ ಸ್ಪರ್ಧಿಸದಿರಲು ನಿರ್ಧರಿಸಿದ್ದ ರಾಜಕೀಯ ಮುತ್ಸದಿ, ಮತ್ತೊಂದು ಅವಧಿಗೆ ಲೋಕಸಭೆಗೆ ಹೋಗಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

ಹಾಗಾದರೆ ಪ್ರಜ್ವಲ್ ರೇವಣ್ಣ ಅವರಿಗೆ ಕೊಟ್ಟ ಭರವಸೆ..?ಸಿ.ಎಸ್​. ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ಅಲ್ಲಿಂದ ಪ್ರಜ್ವಲ್​ ಅವರನ್ನು ಕಣಕ್ಕಿಳಿಸಬೇಕು ಅನ್ನುವ ಚಿಂತನೆ ನಡೆಯುತ್ತಿದೆ. ಎಂದು ತಿಳಿದು ಬಂದಿದೆ.

ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗ ಪ್ರಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಉನ್ನತ ಜವಾಬ್ದಾರಿ ದೊರೆಯುವ ಸಾಧ್ಯತೆ ಇದೆ. ಹೀಗಾಗಿ ಅವರು ಮತ್ತೆ ಹಾಸನದಿಂದ ಸ್ಪರ್ಧಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್ ನ ಹಲವು ನಾಯಕರು ತುದಿಗಾಲಿನಲ್ಲಿ ನಿಂತಿದ್ದಾರೆ.ಹೀಗಾಗಿ ಪ್ರಜ್ವಲ್ ಸ್ಪರ್ಧೆ ಸಾಕಷ್ಟು ಸಮಸ್ಯೆ ತಂದೊಡ್ಡಲಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: