Advertisements

‘ನಿವಿ’ಗೆ ‘ಕಿಕಿ’ ಕಂಟಕ – ಪೊಲೀಸರಿಂದ ಕಾನೂನು ಕ್ರಮದ ಸಾಧ್ಯತೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕಿಕಿ ಚಾಲೆಂಜ್ ಸ್ವೀಕರಿಸಬೇಡಿ ಎಂದು ಪೊಲೀಸರು ನೀಡಿದ್ದ ಎಚ್ಚರಿಕೆಯನ್ನು ಉಲ್ಲಂಘಿಸಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಾದಕ ಡ್ಯಾನ್ಸ್ ಮಾಡಿ ತಾನೊಬ್ಬ ಸೆಲೆಬ್ರೆಟಿ ಅದೇನೂ ಮಾಡಲು ಸಾಧ್ಯ ಅನ್ನುವಂತೆ ವರ್ತಿಸಿದ್ದರು.

ಆದರೆ ಇದೀಗ ಮಾಡಿದ ಪಾಪದ ಕೆಲಸಕ್ಕೆ ಶಿಕ್ಷೆ ಅನುಭವಿಸಬೇಕಾಗಿದೆ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕನ್ನಡ ಸಂಘಟನೆಯೊಂದು ದೂರು ನೀಡಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದೆ.

ಹಲಸೂರು ಗೇಟ್ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿರುವ ಕನ್ನಡ ಚಳವಳಿ ಸಂಘಟನೆ ಮುಖಂಡ ನಾಗೇಶ್ ಲಿಖಿತ ದೂರನ್ನು ನೀಡಿದ್ದಾರೆ. ಅವರೊಬ್ಬರು ಸೆಲೆಬ್ರೆಟಿ, ಅವರನ್ನು ಫಾಲೋ ಮಾಡುವ ಅಭಿಮಾನಿಗಳಿದ್ದಾರೆ.ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕೆಲಸವನ್ನು ಅವರು ಮಾಡಬೇಕೇ ಹೊರತು, ಅದನ್ನು ಬಿಟ್ಟು ಪ್ರಚೋದನೆ ಮಾಡುವ ಕೆಲಸ ಮಾಡಬಾರದು ಎಂದು ದೂರಿದ್ದಾರೆ.

ನಿಜಕ್ಕೂ ನಿವೇದಿತಾ ವಿರುದ್ಧ ಕಾನೂನು ಕ್ರಮದ ಅಗತ್ಯವಿದೆ. ಪೊಲೀಸರು ಕೊಟ್ಟ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ ಅಂದರೆ ಏನರ್ಥ. ಬಿಗ್ ಬಾಸ್ ಮನೆಯಲ್ಲಿ ಪಾಲ್ಗೊಂಡ ತಕ್ಷಣ ನಿವೇದಿತಾ ದೊಡ್ಡ ಸೆಲೆಬ್ರೆಟಿಯಾಗುವುದಿಲ್ಲ. ಕಲ್ಲು ಮುಳ್ಳಿನ ಹಾದಿ ಸವೆಸಿ ಬಂದ ಅನೇಕರು ಸೆಲೆಬ್ರೆಟಿ ಸ್ಥಾನದಲ್ಲಿ ಕೂತಿದ್ದಾರೆ ಅನ್ನುವುದನ್ನು ಆಕೆ ನೆನಪಿಟ್ಟುಕೊಳ್ಳಬೇಕು.

Advertisements

2 Comments on “‘ನಿವಿ’ಗೆ ‘ಕಿಕಿ’ ಕಂಟಕ – ಪೊಲೀಸರಿಂದ ಕಾನೂನು ಕ್ರಮದ ಸಾಧ್ಯತೆ

  1. Pingback: ಪುನೀತ್ ಕೈಯಲ್ಲಿ ಕಪ್ಪು ದಾರ ಯಾಕೆ ಬಂತು…?

  2. Pingback: ಸೆಲೆಬ್ರೆಟಿಗಳಿಗೆ ಹಿಡಿದ ಕಿಕಿ ಭೂತವನ್ನು ಬಿಡಿಸುವ ಐಡಿಯಾ ನಿಮ್ಮಲ್ಲಿದೆಯೇ..?

Leave a Reply

%d bloggers like this: