Advertisements

ಪುನೀತ್ ಕೈಯಲ್ಲಿ ಕಪ್ಪು ದಾರ ಯಾಕೆ ಬಂತು…?

ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ನಟ ಸಾರ್ವಭೌಮ ಚಿತ್ರ ಮೊದಲ ದಿನದಿಂದಲೂ ಕುತೂಹಲ ಹುಟ್ಟಿಸಿದೆ. ಪವನ್ ಒಡೆಯರ್ ಕೈ ಹಾಕಿರುವ ಪ್ರಾಜೆಕ್ಟ್ ಒಳಗೆ ಏನಿದೆ ಅನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಆದರೆ ಚಿತ್ರದ ಕಥೆಯೇನು ಅನ್ನುವುದರ ಒಂದಿಷ್ಟು ಸುಳಿವನ್ನೂ ಬಿಟ್ಟುಕೊಟ್ಟಿಲ್ಲ ಚಿತ್ರ ತಂಡ. ಆದರೆ ಚಿತ್ರದ ಶೂಟಿಂಗ್ ಪ್ರಾರಂಭವಾದ ನಂತರ ಪುನೀತ್ ಕೈಯಲ್ಲೊಂದು ಕಪ್ಪು ದಾರ ಬಂದಿತ್ತು. ಎಂದಿಗೂ ಏನನ್ನೂ ಕೈಗೆ ಕಟ್ಟಿಕೊಳ್ಳದ ಪುನೀತ್ ಕಪ್ಪು ದಾರ ಕಟ್ಟಿದ್ದು ಯಾಕೆ ಅನ್ನುವುದು ಎಲ್ಲರ ಪ್ರಶ್ನೆಯಾಗಿತ್ತು.

ವಿಡಿಯೋ ನೋಡಲು : ಇವೆಲ್ಲ ಚಿತ್ರದ ಪ್ರಮೋಷನ್ ಎಂದು ಅವರು ಮಾತು ತೇಲಿಸಿದ್ದರು. ಹಾಗಾದರೆ ಕಪ್ಪು ದಾರದ ರಹಸ್ಯವೇನು..

ಕಥೆಯ ರಹಸ್ಯ ಕಾಪಾಡಿಕೊಂಡಿದ್ದ ನಟ ಸಾರ್ವಭೌಮನ ಸ್ಟೋರಿ ಲೈಟಾಗಿ ಬಯಲಾಗಿದೆ. ಪುನೀತ್ ಪಾತ್ರದ ಚಿಕ್ಕ ಎಳೆಯೊಂದು ಇದೀಗ ರಿವೀಲ್ ಆಗಿದೆ.

ಬಳ್ಳಾರಿ, ಮೈಸೂರಿನಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಇದೀಗ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು. ಪುನೀತ್ ಅವರನ್ನು ಪೊಲೀಸರು ಬಂಧಿಸುತ್ತಿರುವ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ.

ಇದನ್ನೂ ಓದಿ : SSLC ವಿದ್ಯಾರ್ಥಿಯೊಂದಿಗೆ ಪರಾರಿಯಾದ 29ರ ಹರೆಯದ ಶಿಕ್ಷಕಿ

ಇದೇ ವೇಳೆ ಮಾತನಾಡುವ  ಚಿಕ್ಕಣ್ಣ, ಅಪ್ಪುವನ್ನು ಪೊಲೀಸರು ಆರೆಸ್ಟ್ ಮಾಡಿದ್ದರ ಹಿಂದೆ ದೆವ್ವದ ಕಾಟವಿದೆ ಅನ್ನುವುದನ್ನು ಮಾಧ್ಯಮದವರಿಗೆ ಹೇಳುವ ದೃಶ್ಯಗಳನ್ನು ಕೂಡಾ ನಿರ್ದೇಶಕರು ರೆಕಾರ್ಡ್ ಮಾಡಿದ್ದಾರೆ.

ಅವನು ಕಪ್ಪು ದಾರ ಕಟ್ಟಿಕೊಂಡಿದ್ದ.ಅವನು ತಾಯತ ಕಳೆದುಕೊಂಡಿದ್ದಾನೆ, ಅಲ್ಲಿಂದ ಪ್ರಾಬ್ಲಂ ಶುರುವಾಗಿದೆ, ಬಾತ್ ರೂಮ್ ನಲ್ಲಿ ರಕ್ತ ಬರುತ್ತದೆ, ಅವನ ಮೈ ಮೇಲೆ ದೆವ್ವ ಬರುತ್ತದೆ ಎಂದೆಲ್ಲಾ ಈ ವೇಳೆ ಚಿಕ್ಕಣ್ಣ ಮಾತನಾಡಿದ್ದಾರೆ.

ಅಲ್ಲಿಗೆ ನಟ ಸಾರ್ವಭೌಮ ಚಿತ್ರದಲ್ಲಿ ಪುನೀತ್ ಗೆ ದುಷ್ಟ ಶಕ್ತಿಯ ಕಾಟವೊಂದು ಕಾಡುತ್ತದೆ. ಅದಕ್ಕಾಗಿ ಅವರು ತಾಯತ ಕಟ್ಟಿಕೊಂಡಿದ್ದರು ಅನ್ನುವುದು ರಿವೀಲ್ ಆಗಿದೆ.

‘ನಿವಿ’ಗೆ ‘ಕಿಕಿ’ ಕಂಟಕ – ಪೊಲೀಸರಿಂದ ಕಾನೂನು ಕ್ರಮದ ಸಾಧ್ಯತೆ

Advertisements

Leave a Reply

%d bloggers like this: