Advertisements

ರಶ್ಮಿಕಾ V/S ಅಭಿಮಾನಿಗಳು –  ಅತೀಯಾದ ರೋಮಾನ್ಸ್ ಅಪಾಯಕಾರಿ

ಕಿರಿಕ್ ಪಾರ್ಟಿಯ ಬೆಡಗಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ದು ಮಾಡುತ್ತಿರುತ್ತಾರೆ. ಅವರ ನಟಿಸಿದ ಪ್ರತಿಯೊಂದು ಸಿನಿಮಾವೂ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತದೆ.

ಕೆಲ ದಿನಗಳಿಂದ ಗೀತಾ ಗೋವಿಂದಂ ತೆಲುಗು ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಆಡಿದ ಮಾತಿನ ಕಾರಣದಿಂದ ವೈರಲ್ ಆಗಿರುವ ರಶ್ಮಿಕಾ ಇದೀಗ ರೋಮಾನ್ಸ್ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ.

ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ

ಗೀತಾ ಗೋವಿಂದಂ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಅತಿಯಾದ ರೋಮಾನ್ಸ್ ಮಾಡಿರುವುದಕ್ಕೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಮೇಲೆ ಬೇಸರ ಮಾಡಿಕೊಂಡಿದ್ದಾರೆ.

ಗೀತಾ ಗೋವಿಂದಂ ಚಿತ್ರದ ಪೋಸ್ಟರ್ ಗೆ ಕಮೆಂಟ್ ಮಾಡುತ್ತಿರುವ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

tr

ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೀಗ ಬೇರೆ ನಟನ ಜೊತೆ ಅತಿಯಾದ ರೋಮಾನ್ಸ್ ಮಾಡುವುದು ಸರಿನಾ? ಎಂದು ಟ್ವೀಟರಿಗರು ಪ್ರಶ್ನಿಸಿದ್ದಾರೆ.

ಅಷ್ಟು ಹೊತ್ತು ತಾಳ್ಮೆ ಕಾಪಾಡಿಕೊಂಡಿದ್ದ ರಶ್ಮಿಕಾ, ರಕ್ಷಿತ್ ಹೆಸರು ಪ್ರಸ್ತಾಪವಾದ ಬೆನ್ನಲ್ಲೇ “ಗೀತಾ ಗೋವಿಂದಂ ಚಿತ್ರದಲ್ಲಿ ನಾನು ವಿಜಯ್ ದೇವರಕೊಂಡ ಅವರ ಪತ್ನಿಯಾಗಿ ಅಭಿನಯಿಸಿದ್ದು ಹೀಗಾಗಿ ರೋಮಾನ್ಸ್ ದೃಶ್ಯಗಳು ಇರುವುದು ಸಾಮಾನ್ಯ” ಎಂದಿದ್ದಾರೆ.

ಗೀತಾಗೋವಿಂದಂ ಟೀಸರ್

 ಅಭಿಮಾನಿಗಳ ಕಾಳಜಿಗೂ ಕಾರಣವಿದೆ. ಈ ಹಿಂದೆ ರಶ್ಮಿಕಾ ಅಭಿನಯಿಸಿದ್ದ ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಮಕ್ ಹಾಗೂ ತೆಲುಗಿನ ಚಲೋ ಚಿತ್ರಗಳಲ್ಲಿ ಇಷ್ಟೊಂದು ರೋಮಾನ್ಸ್ ದೃಶ್ಯಗಳು ಇರಲಿಲ್ಲ. ಆದರೆ ವಿಜಯ್ ದೇವರಕೊಂಡ ಚಿತ್ರದಲ್ಲಿ ಅತಿಯಾದ ರೋಮಾನ್ಸ್ ದೃಶ್ಯಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದನ್ನು ಅಭಿಮಾನಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ರಶ್ಮಿಕಾ ಮೇಲಿನ ಕಾಳಜಿಯೋ, ರಕ್ಷಿತ್ ಮೇಲಿನ ಅಕ್ಕರೆ ಅನ್ನಬೇಕೋ ಗೊತ್ತಿಲ್ಲ.

ಪ್ರಥಮ ರಾತ್ರಿಯನ್ನು ಚಿತ್ರೀಕರಿಸಲು ವಿಡಿಯೋಗ್ರಾಫರ್ಸ್ ಬೇಕಾಗಿದ್ದಾರೆ…!

Advertisements

2 Comments on “ರಶ್ಮಿಕಾ V/S ಅಭಿಮಾನಿಗಳು –  ಅತೀಯಾದ ರೋಮಾನ್ಸ್ ಅಪಾಯಕಾರಿ

  1. Pingback: ಆತನೊಂದಿಗೆ ಹೆಚ್ಚು ಡೇಟಿಂಗ್ ಮಾಡಿಲ್ಲ – ನಟಿ ರಶ್ಮಿಕಾ

  2. Pingback: ರಕ್ಷಿತ್ –ರಶ್ಮಿಕಾ ಬ್ರೇಕ್ ಅಪ್ – ಮುರಿದು ಬಿತ್ತು ಕಿರಿಕ್ ಪಾರ್ಟಿ ಜೋಡಿಯ ನಿಶ್ಚಿತಾರ್ಥ – torrentspree

Leave a Reply

%d bloggers like this: