ಪ್ರಥಮ ರಾತ್ರಿಯನ್ನು ಚಿತ್ರೀಕರಿಸಲು ವಿಡಿಯೋಗ್ರಾಫರ್ಸ್ ಬೇಕಾಗಿದ್ದಾರೆ…!

ಹೆಡ್ ಲೈನ್ ನೋಡಿ ದಯವಿಟ್ಟು ನಮ್ಮನು ಬೈಯಬೇಡಿ. ಸಭ್ಯ ಸೈಟ್ ನಲ್ಲಿ ಇದ್ಯಾವ ಸುದ್ದಿ ಎಂದು. ಆದರೆ ಜಗತ್ತಿನಲ್ಲಿ ಅದೆಂಥ ಮೆಂಟಲ್ ಜನ ಇರುತ್ತಾರೆ ಅನ್ನುವುದನ್ನು ತಿಳಿಸುವುದಷ್ಟೇ ನಮ್ಮ ಉದ್ದೇಶ.

ಮದುವೆಯ ನಂತ್ರದ ಪ್ರಥಮ ರಾತ್ರಿ ಅಥವಾ ಶೋಭಾನೆ ಅನ್ನುವ ಕಾರ್ಯವನ್ನು ಹಿಂದಿನ ಕಾಲದಿಂದಲೂ ಮದುವೆಯಷ್ಟೇ ಪವಿತ್ರ ಕಾರ್ಯ ಅನ್ನುವಂತೆ ನೋಡಿಕೊಂಡು ಬರಲಾಗಿದೆ.ವಿದೇಶಿಯರ ಫಸ್ಟ್ ನೈಟ್ ಅನ್ನುವ ಟೈಟಲ್ ಸಿಕ್ಕ ಮೇಲೆ ಪ್ರಸ್ಥಕ್ಕೆ ಪಾವಿತ್ರತೆ ಇಲ್ಲದಂತಾಗಿದೆ.

ಹೀಗಾಗಿಯೇ ಮದುವೆಯ ದಿನದ ರಾತ್ರಿ ನಾಲ್ಕು ಗೋಡೆಯ ನಡುವೆ ಎರಡು ಮನಸ್ಸುಗಳ ಮಿಲನವನ್ನು ಚಲನಚಿತ್ರಗಳಲ್ಲಿ ಆಗೆಲ್ಲಾ ರಸವತ್ತಾಗಿ ತೋರಿಸಿರುವುದು. ಈಗ ಕಾಲ ಕೆಟ್ಟು ಹೋಗಿದೆ ಬಿಡಿ.

ಆದರೆ ಬ್ರಿಟನ್ ಜೋಡಿಯೊಂದು ನಾಲ್ಕು ಗೋಡೆಯ ನಡುವೆ ಎರಡೇ ಎರಡು ವ್ಯಕ್ತಿಯ ಖಾಸಗಿ ಕೆಲಸಕ್ಕೆ ಮೂರನೇಯವನ ಎಂಟ್ರಿ ಕೊಡಲು ನಿರ್ಧರಿಸಿದೆ. ನಮ್ಮ ಮದುವೆ ಮಾತ್ರ ದಾಖಲಾದರೆ ಸಾಲದು, ಪ್ರಥಮ ರಾತ್ರಿಯೂ ಶೂಟ್ ಆಗಬೇಕು ಎಂದು ಬಯಸಿದ್ದಾರೆ.

ನಾವು ದಾಂಪತ್ಯಕ್ಕೆ ಕಾಲಿಡುತ್ತಿರುವ ಯಾವುದೇ ಕ್ಷಣಗಳನ್ನು ಅದು ಹಗಲು ಅಥವಾ ಇರುಳು..ಯಾವ ನೆನಪನ್ನು ಮರೆಯಲು ಇಚ್ಛಿಸುವುದಿಲ್ಲ ಹಾಗಾಗಿ ನಾವು ಈ ನಿರ್ಧಾರ ಮಾಡಿದ್ದೇವೆ ಎಂದಿದೆ ಜೋಡಿ.

ಅಂದ ಹಾಗೇ ಮುಂದಿನ ತಿಂಗಳು ಮದುವೆಯಾಗಲಿರುವ ಜೋಡಿ ಜಾಹೀರಾತು ಒಂದನ್ನು ಕೊಟ್ಟಿದೆ.

request

2016ರಲ್ಲೇ ಮದುವೆಯಾಗಲಿರುವ ಜೋಡಿ ನಿಶ್ಚಿತಾರ್ಥ ಮುಗಿಸಿಕೊಂಡಿದೆ. ಅಂದಿನಿಂದ ನಾವು ಮದುವೆ ನಂತರದ ಕ್ಷಣಗಳನ್ನು ಶೂಟ್ ಮಾಡಲು ವಿಡಿಯೋಗ್ರಾಫರ್ ಅನ್ನು ಈ ಜೋಡಿ ಹುಡುಕುತ್ತಿದೆ. ಆದರೆ ಇವರು ಕೇಳುತ್ತಿರುವುದು ಫಸ್ಟ್ ನೈಟ್ ಶೂಟ್ ಅನ್ನುವುದನ್ನು ಕೇಳಿದ ವಿಡಿಯೋಗ್ರಾಫರ್ ಎಜೆನ್ಸಿಗಳು ಆಫರ್ ಅನ್ನು ತಿರಸ್ಕರಿಸುತ್ತಿದೆ.

£2,000 ಅಂದರೆ 1,79,573 ರೂಪಾಯಿ ಕೊಡಲು ನಾವು ಸಿದ್ದರಿದ್ದೇವೆ. ರಾತ್ರಿ 1 ಗಂಟೆಯಿಂದ 3 ಗಂಟೆ ಮಾತ್ರ ಕೆಲಸ ಅಂದರೂ ಯಾರೊಬ್ಬರೂ ಕೆಲಸ ವಹಿಸಿಕೊಳ್ಳಲು ಸಿದ್ದರಿಲ್ಲ.

ಇದೀಗ ಕೊನೆಯ ಪ್ರಯತ್ನ ಅನ್ನುವಂತೆ ಜಾಹೀರಾತು ಕೊಟ್ಟಿರುವ ಜೋಡಿ ನಮ್ಮ ಮದುವೆ ಚಿತ್ರೀಕರಿಸಲು ಬೇಕಾದಷ್ಟು ಮಂದಿ ಸಿದ್ದರಿದ್ದಾರೆ. ಆದರೆ ಪ್ರಥಮ ರಾತ್ರಿ ಚಿತ್ರೀಕರಿಸಲು ಯಾರೊಬ್ಬರೂ ಸಿದ್ದರಿಲ್ಲ. ಹೀಗಾಗಿ ಯಾರಾಗದರೂ ನಾವು ಕೊಡುವ ಅಸೈನ್ಮೆಂಟ್ ಅನ್ನು ಪೂರ್ತಿ ಮಾಡುವುದಿದ್ದರೆ ಸಂಪರ್ಕಿಸಿ ಎಂದಿದ್ದಾರೆ.

ಹೌದು… ಇವರು ಹೇಳಿದಂತೆ ಫಸ್ಟ್ ನೈಟ್ ಶೂಟ್ ಮಾಡಲು ವಿಡಿಯೋ ಗ್ರಾಫರ್ ಗಳಿಗೆ ತಲೆ ಕೆಟ್ಟಿದೆಯೇ… ಇಂಥ ದೃಶ್ಯಗಳ ಚಿತ್ರೀಕರಣಕ್ಕೆ ಬೇರೆಯದ್ದೇ ಹೆಸರಿದೆ ಅನ್ನುವುದು ಈ ಜೋಡಿಗೆ ಗೊತ್ತಿಲ್ಲ ಅನ್ನಿಸುತ್ತದೆ.

One Comment on “ಪ್ರಥಮ ರಾತ್ರಿಯನ್ನು ಚಿತ್ರೀಕರಿಸಲು ವಿಡಿಯೋಗ್ರಾಫರ್ಸ್ ಬೇಕಾಗಿದ್ದಾರೆ…!

  1. Pingback: ರಶ್ಮಿಕಾ V/S ಅಭಿಮಾನಿಗಳು –  ಅತೀಯಾದ ರೋಮಾನ್ಸ್ ಅಪಾಯಕಾರಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: