Advertisements

ಸೆಲೆಬ್ರೆಟಿಗಳಿಗೆ ಹಿಡಿದ ಕಿಕಿ ಭೂತವನ್ನು ಬಿಡಿಸುವ ಐಡಿಯಾ ನಿಮ್ಮಲ್ಲಿದೆಯೇ..?

ವಿದೇಶದಿಂದ ಬಂದ ಕಿಕಿ ಭೂತ ಈಗ ಕನ್ನಡದ ಸೆಲೆಬ್ರೆಟಿಗಳ ಮನೆ ಬಾಗಿಲಿಗೆ ಬಂದಿದೆ. ಯಾರನ್ನಾದರೂ ಸಾಯಿಸದೆ ಇವರಿಗೆ ನೆಮ್ಮದಿ ಇಲ್ಲ ಅನ್ನಿಸುತ್ತದೆ. ನಿನ್ನೆ ನಿವೇದಿತಾ ಹುಚ್ಚಾಟ ಮೆರೆದ್ರೆ ಇದೀಗ ನಟಿ ಪ್ರಣೀತಾ ಕೂಡಾ ಚಾಲೆಂಜ್ ತೆಗೆದುಕೊಂಡಿದ್ದಾರೆ.

ಯಾರಪ್ಪ ಈ ಪ್ರಣೀತಾ ಅಂತೀರಾ, ಪೊರ್ಕಿ, ಜರಾಸಂಧ,, ಭೀಮಾ ತೀರದಲ್ಲಿ, ಮಿಸ್ಟರ್ 420 ಹೀಗೆ ಅನೇಕ ಕನ್ನಡ ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಜೊತೆಗೆ ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ ಅನುಭವ ಇವರಿಗಿದೆ.

ಇಷ್ಟೊಂದು ಅನುಭವ ಇದ್ದರೂ ಮಾಡಿದ್ದು ಮಾತ್ರ ಮೂರನೇ ದರ್ಜೆಯ ಕೆಲಸ. ಸೆಲೆಬ್ರೆಟಿ ಅನ್ನಿಸಿಕೊಂಡವರು ಸಮಾಜಕ್ಕೆ ಮಾದರಿಯಾಗಿರಬೇಕು. ಕಂಟಕವಾಗಬಾರದು. ಒಳ್ಳೆಯದ್ದನ್ನು ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಕೆಟ್ಟದ್ದನ್ನು ಮಾಡಬಾರದು.

‘ನಿವಿ’ಗೆ ‘ಕಿಕಿ’ ಕಂಟಕ – ಪೊಲೀಸರಿಂದ ಕಾನೂನು ಕ್ರಮದ ಸಾಧ್ಯತೆ

ಆದರೆ ಪ್ರಣೀತಾ ಮಾಡಿದ್ದು ಕಿಕಿ ಡ್ಯಾನ್ಸ್ ಹೆಸರನಲ್ಲಿ ಹುಚ್ಚಾಟ.

ಚಲಿಸುತ್ತಿರುವ ಕಾರಿನಿಂದ ಇಳಿದು ನೃತ್ಯ ಮಾಡುವ ಪ್ರಣೀತಾ, ಕಾರು ಮುಂದೆ ಹೋಗುತ್ತಿದ್ದಂತೆ ಹಿಂದೆ ಓಡೋಡಿ ಬಂದು ಕಾರು ಹತ್ತುವುದು ಸೆರೆಯಾಗಿದ್ದು, ಅದನ್ನೂ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಇದನ್ನು ಚಿತ್ರೀಕರಿಸಲಾಗಿದ್ದು, ಈಗ ಫೇಸ್ ಬುಕ್ ನಲ್ಲಿ ಹಾಕಿಬಿಟ್ಟಿದ್ದೇನೆ. ಖಾಲಿ ರಸ್ತೆ, ಅಥವಾ ವಸತಿ ಪ್ರದೇಶದಲ್ಲಿ ಇಂತಹ ಚಾಲೆಂಜ್ ಮಾಡಬೇಕು ಎಂದು ಸಲಹೆ ಬೇರೆ ಕೊಟ್ಟಿದ್ದಾರೆ.

ಕಿಕಿ ಚಾಲೆಂಜ್ ಸ್ವೀಕರಿಸಿ ಕನ್ನಡಿಗರಿಂದ ಉಗಿಸಿಕೊಂಡ ನಿವೇದಿತಾ ಗೌಡ – ಚಂದನ್ Answer please

ಪೊಲೀಸರು ಕೇಸು ಜಡಿದು ಜೈಲಿಗಟ್ಟದ ಹೊರತು ನಿಮಗೆ ಬುದ್ದಿ ಬರುವುದಿಲ್ಲ. ಸೆಲೆಬ್ರೆಟಿಗಳಾದವರು ಸೆಲೆಬ್ರೆಟಿಗಳಾಗಿದ್ದರೆ ಚೆಂದ. ಪುನೀತ್, ದರ್ಶನ್, ಸುದೀಪ್, ಗಣೇಶ್, ವಿಜಯ್ ಹೀಗೆ ಸಾಲು ಸಾಲು ಕನ್ನಡ ನಾಯಕ ನಟರನ್ನು, ರಚಿತಾ, ರಶ್ಮಿಕಾ, ರಾಗಿಣಿ, ರಾಧಿಕಾ, ರಕ್ಷಿತಾರನ್ನು ನೋಡಿಯಾದರು ಕಲಿಯಿರಿ.

ಕಿಕಿ ಡ್ಯಾನ್ಸ್ ಅಪಾಯಕಾರಿ ಎಂದು ಪೊಲೀಸರು ಸಾರಿ ಸಾರಿ ಹೇಳುತ್ತಿದ್ದಾರೆ. ಆದರೂ ಮೋಜಿಗೆ ಕೈ ಹಾಕುತ್ತಿರುವ ಸೆಲೆಬ್ರೆಟಿಗಳಿಗೊಂದು ಧಿಕ್ಕಾರವಿರಲಿ.

.ಮುಂಬೈಯಲ್ಲಿ ಇಂತಹ  ಹುಚ್ಚಾಟ ನಡೆಸಲು ಹೋದಾಗ ದುಷ್ಕರ್ಮಿಗಳು ನಟಿಯೊಬ್ಬರ ಬ್ಯಾಗ್  ಕದ್ದು ಕೊಂಡು ಹೋಗಿದ್ದಾರೆ. ನಿಮಗೂ ಹಾಗೇ ಆದರೆ ಮಾತ್ರ ಬುದ್ಧಿ ಬರುತ್ತದೆ. ಪೊಲೀಸರು ಗಂಟಲು ನೋವಾಗುವಂತೆ ಕೂಗಿದರು ನಿಮ್ಮ ಕಿವಿ ಕಿವುಡಾಗಿದೆಯಲ್ಲ.

Advertisements

One Comment on “ಸೆಲೆಬ್ರೆಟಿಗಳಿಗೆ ಹಿಡಿದ ಕಿಕಿ ಭೂತವನ್ನು ಬಿಡಿಸುವ ಐಡಿಯಾ ನಿಮ್ಮಲ್ಲಿದೆಯೇ..?

  1. Pingback: ಬ್ಯಾಗ್ ಕೊಟ್ಟು ಶಿಲ್ಪಾ ಶೆಟ್ಟಿಯನ್ನು ಪಟಾಯಿಸಿದ್ದ ಕುಂದ್ರಾ – torrentspree

Leave a Reply

%d bloggers like this: