ಟೀಸರ್ ನಲ್ಲಿ ಮುಗ್ಗರಿಸಿದ ನಿಖಿಲ್ – ಸೀತಾರಾಮ ಕಲ್ಯಾಣ ಗೆಲುವಿನ ಕ್ರೆಡಿಟ್ ಚಿಕ್ಕಣ್ಣ ಮತ್ತು ರಚಿತಾಗೆ

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯವಾಗಿ ತಾವು ಅಭಿವೃದ್ಧಿ ಹೊಂದಬೇಕು ಅನ್ನುವ ಕನಸು ಕಟ್ಟಿಕೊಂಡು ಹೊರಟಿದ್ದಾರೆ. ಮತ್ತೊಂದು ಕಡೆ ಮಗ ನಿಖಿಲ್ ನನ್ನು ದಡ ಸೇರಿಸಬೇಕು ಅನ್ನುವುದು ಅವರ ಗುರಿ. ತಂದೆಯಾದ ಪ್ರತಿಯೊಬ್ಬನಿಗೂ ಇದು ಇರುವುದು ಸಹಜವೇ. ಆದರೆ ನಿಖಿಲ್ ಕುಮಾರ ಸ್ವಾಮಿ ಸೆಲೆಬ್ರೆಟಿ ಕಿಡ್ ಆಗಿ ಬೆಳೆದ ಹುಡುಗ, ಹೀಗಾಗಿ ಕುಮಾರಸ್ವಾಮಿಯಂತೆ ಸಾಮಾನ್ಯರೊಡನೆ ಬೆರೆಯುವುದು ಕಷ್ಟವಾಗುವುದಿದೆ. ಹೀಗಾಗಿ ನಿಖಿಲ್ ಭವಿಷ್ಯ ಕಟ್ಟುವುದು ಕುಮಾರಸ್ವಾಮಿಯವರಿಗೆ ತಲೆ ನೋವಾಗಿದೆ.

ನಿರೀಕ್ಷೆಯಂತೆ ಉನ್ನತ ವ್ಯಾಸಂಗ ಮಾಡಲಿಲ್ಲ. ಹಾಕಿಕೊಟ್ಟ ವ್ಯವಹಾರಗಳನ್ನು ಸರಿಯಾಗಿ ನಿಭಾಯಿಸಲಿಲ್ಲ. ಕಸ್ತೂರಿ ವಾಹಿನಿ ಗುಚ್ಛವನ್ನಾದರೂ ನೋಡಿಕೊಂಡಿರು ಎಂದು ಜವಾಬ್ದಾರಿ ಕೊಟ್ಟರೆ ಅದನ್ನೂ ದಡ ಸೇರಿಸಲಿಲ್ಲ.

ಹೀಗಾಗಿ ಕೊನೆಯ ಪ್ರಯತ್ನ ಅನ್ನುವಂತೆ ನಿಖಿಲ್ ನನ್ನು ಸಿನಿಮಾ ರಂಗಕ್ಕೆ ತಂದು ನಿಲ್ಲಿಸಿದ್ದಾರೆ ತಂದೆ ಕುಮಾರಸ್ವಾಮಿ. ದೊಡ್ಡ ಮೊತ್ತದಲ್ಲಿ ಕಾಸು ಸುರಿದು ಜಾಗ್ವಾರ್ ಅನ್ನುವ ಸಿನಿಮಾ ನಿರ್ಮಿಸಿದರು. ಆದರೆ ನಟನೆಯ ಕೊರತೆಯ ಕಾರಣದಿಂದ ಚಿತ್ರ ಸೋತಿತು. ಮೇಕಿಂಗ್ ಅದ್ಭುತವಾಗಿತ್ತು, ಆದರೆ ನಿಖಿಲ್ ನಟನೆಯನ್ನು ನೋಡುವುದೇ ದೊಡ್ಡ ಹಿಂಸೆಯಾಗಿತ್ತು.

ಹೀಗಾಗಿ ತೆಲುಗಿನಲ್ಲಿ ಮಗನನ್ನು ನೆಲೆಯೂರಿಸಬೇಕು ಎಂದು ಕಂಡಿದ್ದ ಕನಸು ನುಚ್ಚು ನೂರಾಯ್ತು.

ಇದೀಗ ಸೀತಾರಾಮ ಕಲ್ಯಾಣ ಅನ್ನುವ ಸಿನಿಮಾವನ್ನು ನಿಖಿಲ್ ಗಾಗಿಯೇ ನಿರ್ಮಿಸಲಾಗುತ್ತದೆ. ಬಹುತೇಕ ಚಿತ್ರೀಕರಣ ಮುಗಿದಿದ್ದು ಫೈನಲ್ ಟಚ್ ಅಪ್ ಕಾರ್ಯ ನಡೆಯುತ್ತಿದೆ. ಈ ಸಿನಿಮಾದ ಬಗ್ಗೆ ಒಂದಿಷ್ಟು ನಿರೀಕ್ಷೆಗಳಿತ್ತು, ಹರ್ಷ ಅನ್ನುವ ಪ್ರತಿಭಾನ್ವಿತ ನಿರ್ದೇಶಕನ ಗರಡಿಯಾಗಿರುವುದರಿಂದ ಸಿನಿಮಾ ಚೆನ್ನಾಗಿ ಬರುತ್ತದೆ ಅನ್ನುವ ಕಲ್ಪನೆ ಇತ್ತು.

ಆದರೆ ರಾಮನಗರದಲ್ಲಿ ಬಿಡುಗಡೆಯಾಗಿರುವ ಟೀಸರ್ ಎಲ್ಲಾ ನಿರೀಕ್ಷೆಗಳಿಗೆ ಬೆಂಕಿ ಹಚ್ಚಿದೆ. ನಿಖಿಲ್ ನನ್ನು ಚುನಾವಣೆಗೆ ನಿಲ್ಲಿಸುವ ಸಿದ್ದತೆಯೊಂದು ನಡೆಯುತ್ತಿದೆ ಅನ್ನುವ ಹಿಂಟ್ ಅನ್ನು ಟೀಸರ್ ಕೊಟ್ಟಿದೆ. ಟೀಸರ್ ನಲ್ಲಿ ಒಂದೇ ಒಂದು ಡೈಲಾಗ್ ಇಲ್ಲ, ನಾಯಕಿ ರಚಿತಾ ರಾಮ್ ನೆರಳೇ ಇಲ್ಲ, ಹೋಗ್ಲಿ ಚಿಕ್ಕಣ ಚಮಕ್ ಅದೂ ಇಲ್ಲ.

ಹೇಗಿದೆ ನೋಡಿ ಸೀತಾರಾಮ ಕಲ್ಯಾಣ ಟೀಸರ್

ಇನ್ನು ಇದು ಸರೈನೋಡು ಚಿತ್ರದ ರಿಮೇಕ್ ನಂತಿದೆ. ರಿಮೇಕ್ ಮಾಡಿದ್ದರೋ ಇಲ್ಲವೋ ಕಾಪಿಯಂತು ಮಾಡಿದ್ದಾರೆ ಅನ್ನುವ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಹಾಗಾದರೆ ಸರೈನೋಡು ಟೀಸರ್ ಇಲ್ಲಿದೆ.

ಟೀಸರ್ ಅಂದ್ರೆ ಅದು ವಾವ್ ಅನ್ನುವಂತಿರಬೇಕು, ಇತ್ತೀಚಿನ ದಿನಗಳಲ್ಲಿ ಟೀಸರ್ ಗಳೇ ಚಿತ್ರದ ಹಣೆ ಬರಹವನ್ನು ಬರೆಯುತ್ತಿದೆ. ಹೀಗಾಗಿ ಸೀತಾರಾಮ ಕಲ್ಯಾಣದ ಟೀಸರ್ ನೋಡಿದರೆ ನಿಖಿಲ್ ಚಂದನವನದಲ್ಲಿ ನೆಲೆಯೂರುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಹಾಗಂತ ಅಸಾಧ್ಯವೆಂದಲ್ಲ, ಒಂದಿಷ್ಟು ಬಾಡಿ ಲ್ಯಾಂಗ್ವೇಜ್, ಜನರೊಂದಿಗೆ ಬೆರೆಯುವ ಶೈಲಿ, ಹಾಗೂ ಜನರನ್ನು ನೋಡುವ ರೀತಿ ಬದಲಾಗಬೇಕು. ಆಗ ನಿಖಿಲ್ ಹಿರೋ ಆದರೂ ಆಗಬಹುದು.

ಹಾಗಾದರೆ ಸೀತಾರಾಮ ಕಲ್ಯಾಣ ಸೋಲು ಕಾಣುತ್ತದೆಯೇ,ಖಂಡಿತಾ ಇಲ್ಲ ಚಿಕ್ಕಣ್ಣ ಮತ್ತು ರಚಿತಾ ರಾಮ್ ದಡ ಸೇರಿಸುತ್ತಾರೆ ಬಿಡಿ. ಅವರಿಬ್ಬರಿಗೆ ದೊಡ್ಡ ಫ್ಯಾನ್ ಬಳಗವಿದೆ. ಹೀಗಾಗಿ ನಿಖಿಲ್ ಚಿತ್ರ ಯಶಸ್ವಿಯಾದರೆ ಅದರ ಕ್ರೆಡಿಟ್ ರಚಿತಾ ಮತ್ತು ಚಿಕ್ಕಣ್ಣ ಅವರಿಗೆ ಸಲ್ಲಬೇಕು.

Sarrainodu Teaser Allu Arjun

Nikhil Gowda

ಅಂದ ಹಾಗೇ ನಿಖಿಲ್ ಕುಮಾರಸ್ವಾಮಿಗೆ ಯುವರಾಜ ಎಂದು ಬಿರುದು ಕೊಟ್ಟವರು ಯಾರು.?

One Comment on “ಟೀಸರ್ ನಲ್ಲಿ ಮುಗ್ಗರಿಸಿದ ನಿಖಿಲ್ – ಸೀತಾರಾಮ ಕಲ್ಯಾಣ ಗೆಲುವಿನ ಕ್ರೆಡಿಟ್ ಚಿಕ್ಕಣ್ಣ ಮತ್ತು ರಚಿತಾಗೆ

  1. Pingback: ನಿಖಿಲ್ ಆಯ್ತು..ಇದೀಗ ಅಂಬಿ ಪುತ್ರನ ಜೊತೆ ರಚಿತಾ….. – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: