Advertisements

ಏನಿದು ರಚಿತಾ ಹೊಸ ಅವತಾರ…?

ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ ಅವರಿಗೆ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಒಂದೆಡೆ ಕೈ ತುಂಬಾ ಚಿತ್ರಗಳ ಆಫರ್. ಮತ್ತೊಂದು ಕಡೆ ರಿಯಾಲಿಟಿ ಶೋ ನಲ್ಲೂ ಬ್ಯುಸಿಯಾಗಿದ್ದಾರೆ.

ಆಯೋಗ್ಯ, ಸೀತಾರಾಮ ಕಲ್ಯಾಣದ ಬೆನ್ನಲ್ಲೇ ಏಪ್ರಿಲ್ ಅನ್ನುವ ಹೊಸ ಪ್ರಾಜೆಕ್ಟ್ ಗೆ ರಚಿತಾ ಸಹಿ ಹಾಕಿದ್ದಾರೆ. ಈಗಾಗಲೇ ಫೋಟೋ ಶೂಟ್ ಮುಗಿಸಿರುವ ಚಿತ್ರ ತಂಡ ‘ಏಪ್ರಿಲ್ ‘ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ.

ಮೊದಲ ಬಾರಿಗೆ ರಚಿತಾ ಹಿರೋಯಿನ್ ಸುತ್ತ ಹೆಣೆದಿರುವ ಕಥೆಯೊಂದರಲ್ಲಿ ನಟಿಸುತ್ತಿದ್ದಾರೆ. ಏಪ್ರಿಲ್​ ಡಿಸೋಜಾ ಅನ್ನೋ ಪಾತ್ರದಲ್ಲಿ ರಚಿತಾರಾಮ್​​ ಕಾಣಿಸಿಕೊಳ್ತಾ ಇದ್ದಾರೆ. ಈ ಮೂಲಕ ಇಲ್ಲಿಯವರೆಗೂ ಮಾಡಿರದ ಪಾತ್ರವೊಂದರಲ್ಲಿಲ್ಲಿ ನಟಿಸ್ತಾ ಇದ್ದಾರೆ. ನೈಜ ಘಟನೆಗಳನ್ನ ಆಧರಿಸಿ ಏಪ್ರಿಲ್​ ಚಿತ್ರದ ಕಥೆಯನ್ನ ಹೆಣೆಯಲಾಗಿದೆ.

ನವ ನಿರ್ದೇಶಕ ಸತ್ಯ ರಾಯಲ ಡಿಂಪಲ್​​ ಕ್ವೀನ್ ಗೆ ಡಿಫರೆಂಟ್ ಲುಕ್ ಕೊಟ್ಟಿದ್ದು, ಕಥೆಯನ್ನು ಅವರೇ ಬರೆದಿದ್ದಾರೆ. ನವರಸ ನಾಯಕ ಜಗ್ಗೇಶ್​ ಅಭಿನಯದ 8 ಎಂಎಂ ಸಿನಿಮಾ ನಿರ್ಮಿಸುತ್ತಿ ನಾರಾಯಣ ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಏಪ್ರಿಲ್​ ಚಿತ್ರಕ್ಕೆ ಉದಿತ್​ ಹರಿದಾಸ್ ಸಂಗೀತ ನಿರ್ದೇಶಕರಾಗಿದ್ದು. ಅರ್ಜುನ್​ ಶೆಟ್ಟಿ ಕ್ಯಾಮರಾ ಹಿಡಿಯಲಿದ್ದಾರೆ. ಪ್ರತೀಕ್​ ಶೆಟ್ಟಿ ಎಡಿಟರ್ ಜವಾಬ್ದಾರಿ ಹೊತ್ತಿದ್ದಾರೆ.

38025502_1923713504353881_6974508048064708608_n

Advertisements

Leave a Reply

%d bloggers like this: