Advertisements

ಕಿಕಿ ಚಾಲೆಂಜ್ ಸ್ವೀಕರಿಸಿ ಕನ್ನಡಿಗರಿಂದ ಉಗಿಸಿಕೊಂಡ ನಿವೇದಿತಾ ಗೌಡ – ಚಂದನ್ Answer please

ವಯಸ್ಸಾದರೆ ಸಾಲದು ತಲೆಯಲ್ಲಿ ಬುದ್ದಿಯೂ ಬೆಳೆಯಬೇಕು. ಅದಕ್ಕೊಂದು ಸಾಕ್ಷಿ ಉರಿಗೊಬ್ನೆ ಪದ್ಮಾವತಿ ಅನ್ನುವಂತೆ ಮೆರೆಯುತ್ತಿರುವ ನಿವೇದಿತಾ ಗೌಡ. ಐಶ್ವರ್ಯಾ ರೈ ನಾನೇ ವಿಶ್ವ ಸುಂದರಿ ಅನ್ನುವಂತೆ ನಡೆದಾಡುತ್ತಿದ್ದ ನಿವೇದಿತಾ ಗೌಡ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾಳೆ.

ಮಾಡಬಾರದ್ದನ್ನು ಮಾಡಲು ಹೋಗಿ ಜನ್ಮ ಜಾಲಾಡಿಸಿಕೊಂಡಿದ್ದಾಳೆ.

ಎಲ್ಲೆಡೆ ಇದೀಗ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದೀಗ ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕಿಕಿ ಡ್ಯಾನ್ಸ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಇತ್ತೀಚೆಗಷ್ಟೆ ಬಾಲಿವುಡ್ ನಟಿಯರಾದ ಅದಾ ಶರ್ಮಾ ಹಾಗೂ ನೋರಾ ಫತೇಹಿ ಕಿಕಿ ಡ್ಯಾನ್ಸ್ ಮಾಡಿ ವಿಡಿಯೋವನ್ನು ಶೇರ್ ಮಾಡಿದ್ದರು. ಇದೀಗ ಕಿಕಿ ಚಾಲೆಂಜ್ ಸ್ವೀಕರಿಸಿದ್ದ ನಿವೇದಿತಾ ಗೌಡ ಓಡುವ ಕಾರಿನಿಂದ ಇಳಿದು ಹೆಜ್ಜೆ ಹಾಕಿದ್ದಾರೆ.

ನಿವೇದಿತಾ ಕಿಕಿ ಚಾಲೆಂಜ್ ಗಾಗಿ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ್ದು ಬೇಬಿ ಡಾಲ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಯಾವಾಗ ಅಭಿಮಾನಿಗಳು ತಿರುಗಿ ಬಿದ್ದರೋ, ನಾನು ಖಾಲಿ ರಸ್ತೆಯಲ್ಲಿ ಕಿಕಿ ಡ್ಯಾನ್ಸ್ ಮಾಡಿದ್ದು ಏನು ತೊಂದರೆಯಾಗಿಲ್ಲ. ಆದರೆ ಕಿಕಿ ಡ್ಯಾನ್ಸ್ ಚಾಲೆಂಜ್ ಅನ್ನು ಸ್ವೀಕರಿಸಬೇಡಿ ಎಂದು ಮನವಿ ಮಾಡಿದರು. ಅಷ್ಟು ಹೊತ್ತಿಗೆ ಪೊಲೀಸರು ಕೇಸು ಜಡಿಯುತ್ತಾರೆ ಅನ್ನುವ ಸುದ್ದಿ ಸಿಕ್ಕಿತ್ತು. ತಾವು ಅಪ್ ಲೋಡ್ ಮಾಡಿದ್ದ ವಿಡಿಯೋ ಅನ್ನು ಡಿಲೀಟ್ ಮಾಡಿದ್ರು.

ಸೆಲೆಬ್ರೆಟಿಯಾದರೆ ಸಾಲದು, ಹೇಗೆ ಇರಬೇಕು ಅನ್ನುವುದನ್ನು ಕಲಿಯಬೇಕು ಅನ್ನುವುದು ನಿವೇದಿತಾ ಸಾಕ್ಷಿ.

ಏನೇ ಇರ್ಲಿ ಪೊಲೀಸರು ಕಿಕಿ ಚಾಲೆಂಜ್ ಗೆ ಬೆಂಬಲ ನೀಡಿದ ನಿವೇದಿತಾ ಮೇಲೆ ಕೇಸು ಜಡಿಯಲೇಬೇಕು. ಇಲ್ಲ ಅಂದ್ರೆ ಜನ ಸಾಮಾನ್ಯರಿಗೆ ಬುದ್ದಿ ಬರುವುದಿಲ್ಲ.

Advertisements

One Comment on “ಕಿಕಿ ಚಾಲೆಂಜ್ ಸ್ವೀಕರಿಸಿ ಕನ್ನಡಿಗರಿಂದ ಉಗಿಸಿಕೊಂಡ ನಿವೇದಿತಾ ಗೌಡ – ಚಂದನ್ Answer please

  1. Pingback: ಸೆಲೆಬ್ರೆಟಿಗಳಿಗೆ ಹಿಡಿದ ಕಿಕಿ ಭೂತವನ್ನು ಬಿಡಿಸುವ ಐಡಿಯಾ ನಿಮ್ಮಲ್ಲಿದೆಯೇ..?

Leave a Reply

%d bloggers like this: