Peruser!!! It is a trendy supermarket: read articles on day to day basis in English & Kannada. Read,Share & Care
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿ ಸೀಸನ್ 2 ನಲ್ಲಿ ಅಪ್ಪಣ್ಣ ಹಾಗೂ ಸೂರಜ್ ಧೂಳೆಬ್ಬಿಸಿದ್ದರು. ತಮ್ಮ ನಟನೆಯ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ತಮ್ಮ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರು.
ಇದೀಗ ಇವರ ಸಾಧನೆ ತಕ್ಕ ಪ್ರತಿಫಲ ಸಂದಿದೆ. ಝೀ ಕನ್ನಡ ವಾಹಿನಿ ಇವರಿಬ್ಬರ ಫೇಸ್ ವ್ಯಾಲೂ ಬಳಸಿಕೊಳ್ಳಲು ನಿರ್ಧರಿಸಿದ್ದು, 10 ವರ್ಷಗಳ ಬಳಿಕ ಮತ್ತೆ ಪ್ರಸಾರವಾಗುತ್ತಿರುವ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಕೊಟ್ಟಿದೆ.
ತಮ್ಮ ನೈಜವಾದ ನಿರೂಪಣೆ ಹಾಗೂ ಚುರುಕಾದ ಚಟಾಕಿ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಹೊಸ ಸ್ಪರ್ಶವನ್ನು ಇವರಿಬ್ಬರೂ ನೀಡಲಿದ್ದಾರೆ.
ಆಗಸ್ಟ್ 4 ರಿಂದ ಶನಿವಾರ ಮತ್ತು ಭಾನುವಾರ ಪ್ರಸಾರ ಆರಂಭಿಸಲಿರುವ ಕಾರ್ಯಕ್ರಮದ ಮೊದಲ ಎಪಿಸೋಡ್ ಗಳಲ್ಲಿ ಜೀ ಕನ್ನಡ ಪರಿವಾರದ ನಾಗಿಣಿ, ಕಮಲಿ, ಬ್ರಹ್ಮಗಂಟು, ಯಾರೇ ನೀ ಮೋಹಿನಿ, ಗಂಗಾ, ಜೋಡಿ ಹಕ್ಕಿ, ಮಹಾದೇವಿ, ಕಾಮಿಡಿ ಕಿಲಾಡಿಗಳು, ಸರಿಗಮಪ ಶೋಗಳ ಕಲಾವಿದರು ಪ್ರತ್ಯೇಕ ತಂಡಗಳಾಗಿ ಪಾಲು ಪಡೆಯಲಿದ್ದಾರೆ.
ಪ್ರತಿ ಸಂಚಿಕೆಯಲ್ಲಿ ಒಟ್ಟು 6 ಜನ ತಾರೆಯರಿರುತ್ತಾರೆ, 4 ಸುತ್ತುಗಳಿರುತ್ತವೆ.
ಕಳೆದ 2007ರಲ್ಲಿ ತನ್ನ ಮೊದಲ ಸರಣಿಯನ್ನು ಶುರುಮಾಡಿದ್ದ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮ ಜನ ಮೆಚ್ಚುಗೆ ಪಡೆದಿತ್ತು.
ಈ ಹಿಂದೆ ಶ್ವೇತಾ ಚೆಂಗಪ್ಪ, ಗೌತಮಿ ಗೌಡ ಈ ಕಾರ್ಯಕ್ರಮವನ್ನು ಈ ಹಿಂದೆ ನಿರೂಪಿಸಿದ್ದರು. ತೆಲುಗಿನಲ್ಲೂ ಪ್ರಸಾರವಾದ ಇದೇ ಕಾರ್ಯಕ್ರಮವನ್ನು ಗೌತಮಿ ನಡೆಸಿಕೊಡುತ್ತಿದ್ದರು.ಈ ಹಿಂದಿನ ಸೀಸನ್ ಗಳಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿತ್ತು. ಆದರೆ ಈ ಬಾರಿ ಪುರುಷರಿಗೂ ಯಾರಿಗುಂಟು ಯಾರಿಗಿಲ್ಲ ವೇದಿಕೆ ಅವಕಾಶ ಮಾಡಿಕೊಡಲಿದೆ.