ಮುಂಬೈ : ಭಾನುವಾರ ದೇಶದೆಲ್ಲೆಡೆ ಪೊಲೀಯೋ ಲಸಿಕಾ ಕಾರ್ಯಕ್ರಮ ನಡೆದಿದ್ದು, ಕೊರೋನಾ ಆತಂಕದ ನಡುವೆ ಈ ಕಾರ್ಯಕ್ರಮ ಯಶಸ್ವಿಯಾಗಿದೆ.
ಈ ನಡುವೆ ಮುಂಬೈ ಅಘಾತಕಾರಿ ಘಟನೆಯೊಂದು ನಡೆದಿದ್ದು, ಪೊಲೀಯೋ ಲಸಿಕೆ ಬದಲು ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗಿದೆ.
ಅದು ಕೂಡಾ ಒಂದಲ್ಲ ಎರಡಲ್ಲ 12 ಮಕ್ಕಳಿಗೆ ಆರೋಗ್ಯ ಸಿಬ್ಬಂದಿ ಸ್ಯಾನಿಟೈಸರ್ ಕುಡಿಸಿದ್ದಾರೆ.
ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು , 5 ವರ್ಷಗ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಅಧಿಕಾರಿಗಳು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಕೊರೋನಾ ಮುನ್ನೆಚ್ಚರಿಕೆ ಸಲುವಾಗಿ ಲಸಿಕೆಗಳ ಜೊತೆ ಸ್ಯಾನಿಟೈಸರ್ ಕೂಡಾ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಲಸಿಕೆ ಯಾವುದು, ಸ್ಯಾನಿಟೈಸರ್ ಯಾವುದು ಅನ್ನುವುದನ್ನು ಗಮನಿಸದ ಸಿಬ್ಬಂದಿ ಈ ಎಡವಟ್ಟು ಮಾಡಿರುವುದಾಗಿ ತಿಳಿಸಿದ್ದಾರೆ.
ಜೊತೆಗೆ ಇದೀಗ ಆರೋಗ್ಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೂ ನಿರ್ಧರಿಸಲಾಗಿದೆ.
ಇದೀಗ ಮಕ್ಕಳ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಕೆಲವೇ ದಿನಗಳಲ್ಲಿ ಎಲ್ಲರೂ ಮನೆಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Discussion about this post