ಛತ್ತೀಸಗಡ : ಸುರ್ಗುಜಾ ಜಿಲ್ಲೆಯಲ್ಲಿ 7 ಗಂಟೆಯಲ್ಲಿ 101 ಮಹಿಳೆಯರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿರುವ ಪ್ರಕರಣ ಇದೀಗ ವಿವಾದಕ್ಕೆ ಕಾರಣವಾಗಿದೆ. ಒಬ್ಬ ಶಸ್ತ್ರಚಿಕಿತ್ಸಕ ಒಂದು ದಿನದಲ್ಲಿ ಗರಿಷ್ಠ 30 ಶಸ್ತ್ರಚಿಕಿತ್ಸಗಳನ್ನು ನೆರವೇರಿಸಬಹುದು. ಆದರೆ 3 ಪಟ್ಟು ಆಪರೇಷನ್ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ರಾಜಧಾನಿ ರಾಯಪುರದಿಂದ 300 ಕಿ.ಮೀ ದೂರವಿರುವ, ಸುರ್ಗುಜಾ ಜಿಲ್ಲೆಯ ಮೈನಪಾಟ ಮಂಡಲ ವ್ಯಾಪ್ತಿಯ ನರ್ಮದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಗಸ್ಟ್ 27ರಂದು ಈ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿತ್ತು.
ಹೀಗಾಗಿ ಸರ್ಕಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಅಕ್ರಮಗಳು ನಡೆದಿದೆ ಅನ್ನುವ ಆರೋಪ ಕೇಳಿ ಬಂದಿತ್ತು. ಏಳು ಗಂಟೆಯಲ್ಲಿ ಶಸ್ತ್ರಚಿಕಿತ್ಸಕರೊಬ್ಬರು 101 ಮಹಿಳೆಯರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ ಅಂದ ಮೇಲೆ ಅದು ಹೇಗೆ ಆಪರೇಷನ್ ಮಾಡಲಾಯ್ತು ಎಂದು ಸ್ಥಳೀಯ ಮಾಧ್ಯಮಗಳು ಪ್ರಶ್ನಿಸಿದೆ. ಇದೀಗ ಈ ಸಂಬಂಧ ತನಿಖೆ ನಡೆಸಲು ಛತ್ತೀಸ್ಗಡ ಸರ್ಕಾರ ಆದೇಶಿಸಿದೆ.
Discussion about this post