ಮಂಗಳೂರು : ಈಗಾಗಲೇ 500 ಮತ್ತು ಸಾವಿರ ರೂಪಾಯಿ ನೋಟ್ ಬ್ಯಾನ್ ಬಳಿಕ, 100 ರೂಪಾಯಿಯ ಹಳೆಯ ನೋಟುಗಳನ್ನು ಬ್ಯಾನ್ ಮಾಡಲು ಆರ್ ಬಿ ಐ ನಿರ್ಧರಿಸಿದೆ.
ಹೊಸ ನೋಟುಗಳು ಭಾರತೀಯ ಕೈಯಲ್ಲಿ ಚಲಾವಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಹಳೆಯ ಸೀರಿಸ್ ಗಳ ಎಲ್ಲಾ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾಹಿತಿ ನೀಡಿರುವ ಆರ್ ಬಿ ಐ ಸಹಾಯ ಮಹಾಪ್ರಬಂಧಕ ಬಿಎಂ ಮಹೇಶ್, ಮಾರ್ಚ್ ಅಂತ್ಯದ ವೇಳೆಗೆ 100 ರೂಪಾಯಿಯ ಹಳೆ ನೋಟುಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲಾಗುವುದು ಅಂದಿದ್ದಾರೆ.
ಹಳೆಯ ನೋಟುಗಳನ್ನೇ ಹೋಲುವ ಖೋಟಾ ನೋಟುಗಳ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಆರ್ ಬಿ ಐ ಈ ನಿರ್ಧಾರಕ್ಕೆ ಬಂದಿದೆ.
ಇದು ಮೋನಿಟೈಸೇಶನ್ ಅಲ್ಲ ಅಂದಿರುವ ಮಹೇಶ್ ಹೊಸ ಸೀರಿಸ್ ಹೊಂದಿರುವ 100 ರೂ ಮುಖ ಬೆಲೆಯ ಹೊಸ ನೋಟುಗಳು ಚಲಾವಣೆಯಲ್ಲಿರಬೇಕು ಅನ್ನುವುದೇ ಮುಖ್ಯ ಗುರಿಯಾಗಿದೆ. ಹೀಗಾಗಿ ಬ್ಯಾಂಕ್ ನವರು ಅಂತಹ ನೋಟುಗಳನ್ನು ಕರೆನ್ಸಿ ಚೆಸ್ಟ್ ಗೆ ಒಪ್ಪಿಸಬೇಕು ಅಂದಿದ್ದಾರೆ.
ಹೀಗಾಗಿ ನಿಮ್ಮ ಬಳಿಯೂ ಹಳೆಯ ಸೀರಿಸ್ ಹೊಂದಿರುವ 100 ರೂಪಾಯಿ ನೋಟುಗಳಿದ್ದರೆ ಅದನ್ನು ಬ್ಯಾಂಕ್ ಗೆ ಒಪ್ಪಿಸುವ ಪ್ರಕ್ರಿಯೆಯನ್ನು ಸಾರ್ವಜನಿಕರು ಪ್ರಾರಂಭಿಸುವುದು ಒಳಿತು. ಯಾರಪ್ಪ ಬ್ಯಾಂಕ್ ಗೆ ಹೋಗ್ತಾರೆ ಅನ್ನುವುದಾದರೆ 100 ನೋಟುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಬದಲು ಅದನ್ನು ಚಲಾವಣೆಗೆ ಬಿಡಿ, ಅದರ ಪಾಡಿಗೆ ಅದು ಬ್ಯಾಂಕ್ ಗೆ ಸೇರಿಕೊಳ್ಳುತ್ತದೆ.
Discussion about this post