ಈ ಬಾರಿಯ ಬಿಗ್ ಬಾಸ್ ಮನೆಯನ್ನು ಸಿಕ್ಕಾಪಟ್ಟೆ ಕಲರ್ ಫುಲ್ ಮಾಡಬೇಕು ಕಲರ್ಸ್ ವಾಹಿನಿಯ ಟೀಂ ಶ್ರಮಿಸುತ್ತಿದೆ. ಕಳೆದ ಬಾರಿ ನಿರೀಕ್ಷಿತ ಟಿ.ಆರ್.ಪಿ ಬಂದಿರಲಿಲ್ಲ, ಹೀಗಾಗಿ ಈ ಬಾರಿ ಸಿಕ್ಕಾಪಟ್ಟೆ ಟಿ.ಆರ್.ಪಿ ಗಳಿಸಲೇಬೇಕು ಅನ್ನುವ ಮಾಸ್ಟರ್ ಪ್ಲಾನ್ ನೊಂದಿಗೆ ಬಿಗ್ ಬಾಸ್ ಟೀಂ ಕೆಲಸ ನಿರ್ವಹಿಸುತ್ತಿದೆ.
ಈಗಾಗಲೇ ಕರ್ನಾಟಕ ಕಾಂಟ್ರವರ್ಸಿ ಮುಖಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅರಚಾಡಿ, ಕಿರುಚಾಡಿ ಟ್ರೋಲ್ ಆದವರೊಂದಿಗೆ ಒಪ್ಪಂದ ಕೂಡಾ ನಡೆದಿದೆ.
ಈ ನಡುವೆ ಹಳ್ಳಿ ಹಕ್ಕಿ ಖ್ಯಾತಿಯ ಮಾಜಿ ಸಂಸದ, ಮಾಜಿ ಶಾಸಕ ವಿಶ್ವನಾಥ್ ಅವರನ್ನೂ ಬಿಗ್ ಬಾಸ್ ಮನೆಗೆ ಕರೆ ತರಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ.
ಕಳೆದ ಬಾರಿಯ ಸೀಸನ್ ಗೆ ವಿಶ್ವನಾಥ್ ಅವರನ್ನು ಆಹ್ವಾನಿಸಲಾಗಿತ್ತು, ಆದರೆ ವೈಯುಕ್ತಿಕ ಕಾರಣಗಳನ್ನು ಕೊಟ್ಟಿದ್ದ ಅವರು ಮಹಾಮನೆ ಪ್ರವೇಶದ ಆಹ್ವಾನವನ್ನು ನಿರಾಕರಿಸಿದ್ದರು. ಈ ಬಾರಿ ಮತ್ತೆ ಪ್ರಯತ್ನಿಸಲಾಗಿದ್ದು, ಈಗಾಗಲೇ ಕೆಲ ಸುತ್ತಿನ ಮಾತುಕತೆಗಳು ಕೂಡಾ ನಡೆದಿದೆಯಂತೆ. ಕಾರ್ಯಕ್ರಮದ ರೂಪುರೇಷೆಗಳನ್ನು ಪರಿಶೀಲನೆ ನಡೆಸಿ ಬಳಿಕ ತೀರ್ಮಾನ ತಿಳಿಸುವುದಾಗಿ ವಿಶ್ವನಾಥ್ ಹೇಳಿದ್ದಾರಂತೆ.
ಹೇಗಿದ್ದರೂ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗುವುದು ಅನುಮಾನ, ಹೀಗಾಗಿ ವಿಶ್ವನಾಥ್ ಮಹಾಮನೆ ಹೋದರೂ ಹೋಗಬಹುದು ಎನ್ನಲಾಗಿದೆ. ಒಂದು ವೇಳೆ ವಿಶ್ವನಾಥ್ ಬಿಗ್ ಬಾಸ್ ಮನೆಗೆ ಹೋದರೆ ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅನೇಕ ರೋಚಕ ಸ್ಟೋರಿಗಳು ಹೊರ ಬಂದರೂ ಅಚ್ಚರಿ ಇಲ್ಲ.