ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಬೇರು ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸುವ ಸಲುವಾಗಿ ರಾಜಕೀಯ ಪಕ್ಷಗಳು ಸಿಕ್ಕಾಪಟ್ಟೆ ಬೆವರು ಹರಿಸುತ್ತಿವೆ. ಲೋಕಲ್ ಫೈಟ್ ನಲ್ಲಿ ಯಾರು ಹೆಚ್ಚು ಸ್ಥಾನ ಗಳಿಸುತ್ತಾರೋ ಅವರೇ ಮುಂದೆ ವಿಧಾನಸೌಧದಲ್ಲಿ ಅಧಿಕಾರ ಹಿಡಿಯುತ್ತಾರೆ ಹೀಗಾಗಿ ಲೋಕಲ್ ಫೈಟ್ ಸದ್ದು ಜೋರಾಗಿದೆ.
ಈ ನಡುವೆ ಕೊಪ್ಪಳದ ಕನಕಗಿರಿ ಭಾಗದ ಹಿರೆಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ತಾಯಿ ಮಗಳು ಕಣದಲ್ಲಿದ್ದಾರೆ.
ಗೋಡಿನಾಳನಲ್ಲಿ ಈರಮ್ಮ ಅನ್ನುವವರು ಚುನಾವಣೆಯ ಕಣದಲ್ಲಿದ್ದರೆ, ಕಟಾಪೂರ ಗ್ರಾಮದಲ್ಲಿ ಈರಮ್ಮನ ಮಗಳು ನೇತ್ರಾವತಿ ಸ್ಪರ್ಧಿಸುತ್ತಿದ್ದಾರೆ.
ನೇತ್ರಾವತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ್ರೆ, ಈರಮ್ಮ ಬಿಜೆಪಿ ಬೆಂಬಲಿತರಾಗಿದ್ದಾರೆ. ನೇತ್ರಾವತಿಗೆ ಗಂಡನ ಒತ್ತಡಕ್ಕೆ ಮಣಿದು ಕಣಕ್ಕಿಳಿದ್ರೆ, ಮಗನ ಒತ್ತಾಯಕ್ಕೆ ಮಣಿದು ಈರಮ್ಮ ಸ್ಪರ್ಧಿಸುತ್ತಿದ್ದಾರೆ.
Discussion about this post