Monday, April 19, 2021

ಗರಿಕೆ ಎಂಬ ದೇವಮೂಲಿಕೆ….. ಹತ್ತಾರು ರೋಗ ಪರಿಹರಿಸಬಲ್ಲ ರಾಮಬಾಣವಿದು…

Must read

- Advertisement -
- Advertisement -

ಗರಿಕೆ ಹುಲ್ಲಿನ ಕಥೆ

ಒಂದು ಕಾಲದಲ್ಲಿ ಒಬ್ಬ ರಾಕ್ಷಸ ಅನಲಾಸುರ ಇದ್ದನು. ಅವನು ಸ್ವರ್ಗದಲ್ಲಿ ಆತಂಕ ಉಂಟು ಮಾಡಿದನು.ಅವನ ಕಣ್ಣಿನಿಂದ ಬರುವ ಬೆಂಕಿಯು ಅವನ ದಾರಿಯಲ್ಲಿ ಯಾರೇ ಬಂದರು ಏನೇ ಬಂದರು ಎಲ್ಲವನ್ನು ಸುಟ್ಟು ಹಾಕುತ್ತಿದ್ದನು. ಹೀಗೆ ಎಲ್ಲವನ್ನು ನಾಶ ಮಾಡುತ್ತಿದ್ದನು. ಆಗ ದೇವನಾದ ಗಣೇಶನನ್ನು ಸಹಾಯಕ್ಕೆ ಆಹ್ವಾನಿಸಲಾಗುತ್ತದೆ.

ಗಣೇಶ ಮತ್ತು ರಾಕ್ಷಸ ಅನಲಾಸುರ ಇಬ್ಬರು ಯುದ್ಧ ಮಾಡುತ್ತಾರೆ. ಆಗ ಅನಲಾಸುರನು ಬೆಂಕಿಯ ಉಂಡೆಗಳನ್ನು ಗಣೇಶನ ಮೇಲೆ ಎಸೆಯುತ್ತಾನೆ. ಆಗ ಗಣೇಶನು ಇವನನ್ನು ಸಂಹಾರ ಮಾಡಲು ವಿರಾಟ ರೂಪವನ್ನು ಪಡೆದು ಸಂಪೂರ್ಣವಾಗಿ ಅನಲಾಸುರನನ್ನು ನುಂಗಿಬಿಟ್ಟನು.ಆಗ ಗಣೇಶನ ದೇಹದಲ್ಲಿ ಅಧಿಕವಾದ ಉಷ್ಣಾಂಶ ಉತ್ಪತ್ತಿಯಾಗಿ ಗಣೇಶನ ಹೊಟ್ಟೆಯು ಸಹ ಊದಿಕೊಂಡು ಬಿಡುವುದು.ಗಣೇಶನು ಈ ದೇಹದ ಉಷ್ಣಾಂಶದಿಂದ ದೇಹಾಲಾಸ್ಯದಿಂದ ಸುಧಾರಿಸಿಕೊಳ್ಳುವುದಕ್ಕೆ ಹರ ಸಾಹಸ ಪಡುತ್ತಿದ್ದನು.

ದೇವತೆಗಳಾದ ಬ್ರಹ್ಮ, ವಿಷ್ಣು ಮಹೇಶ್ವರ,ಸೂರ್ಯ, ಚಂದ್ರ, ಎಲ್ಲರೂ ಗಣೇಶನ ನೋವು ಕಡಿಮೆ ಮಾಡುವುದಕ್ಕೆ ಬಂದರು ಏನು ಮಾಡಿದರೂ ಹೊಟ್ಟೆ ನೋವು ಗಣೇಶನಿಗೆ ಕಡಿಮೆಯಾಗುವುದಿಲ್ಲ.

ಕೊನೆಗೆ ಋಷಿ ಮುನಿಗಳು 21 ಗರಿಕೆಯನ್ನು ತೆಗೆದುಕೊಂಡು ಬಂದು ಗಣೇಶನ ತಲೆಯ ಮೇಲೆ ಇಡುತ್ತಾರೆ. ಆಗ ಗಣೇಶನ ದೇಹದ ಉಷ್ಣಾಂಶವೆಲ್ಲವೂ ಆವಿಯಾಗಿ ಮಾಯಾಜಾಲವಾಗಿ ಕಡಿಮೆಯಾಗುತ್ತದೆ. ಗಣೇಶನು ಸಹ ಗುಣ ಮುಖನಾಗುತ್ತಾನೆ.

ಗಣೇಶನ ಪೂಜೆಯಲ್ಲಿ ಗರಿಕೆಗೆ ವಿಶೇಷ ಮಹತ್ವವಿದೆ. ಇದನ್ನು ದೂರ್ವೆ ಎಂದೂ ಕರೆಯುತ್ತಾರೆ. ದೂರ್ವೆ ಈ ಶಬ್ದವು ದೂಃ ಅವಮ್ ಹೀಗೆ ಆಗಿದೆ. ‘ದೂಃ’ ಅಂದರೆ ದೂರದಲ್ಲಿ ಇದ್ದದ್ದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆಯಾಗಿದೆ, ಅಂದರೆ ಗರಿಕೆಯಾಗಿದೆ. ಗಣಪತಿಗೆ ಅರ್ಪಿಸಬೇಕಾದ ಗರಿಕೆಯು ಎಳೆಯದಾಗಿರಬೇಕು. ಇದನ್ನೇ ‘ಬಾಲತೃಣಮ್’ ಎನ್ನುತ್ತಾರೆ.

ಗರಿಕೆ ಹುಲ್ಲು ಜಾತಿಯ ಸಸ್ಯ. ಹೆಚ್ಚು ಆರೈಕೆ ಬೇಡದೆ ತನ್ನಷ್ಟಕ್ಕೆ ತಾನು ಬೆಳೆಯುವ ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಕ. ಗರಿಕೆಯನ್ನು ಸಂಸ್ಕೃತದಲ್ಲಿ ಅನಂತಾ, ಶತಪರ್ವಿಕಾ, ಸಹಸ್ರವೀರ್ಯಾ, ಶತವಲ್ಲಿ ಎನ್ನುತ್ತಾರೆ. ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಸಿ ಹೊಂದಿರುವ ಗರಿಕೆಯನ್ನು ಅನಾದಿ ಕಾಲದಿಂದಲೂ ರಕ್ತ ಸೋರಿಕೆ ತಡೆಗಟ್ಟಲು ಬಳಕೆ ಮಾಡುವುದಿದೆ. ಹಸಿರು, ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ. ಎಲೆಗಳು ಉದ್ದವಾಗಿ, ಕಾಂಡಗಳು ದಪ್ಪವಾಗಿರುವ ಗಂಡದೂರ್ವಾ ಎಂಬ ಇನ್ನೊಂದು ಬಗೆ ಗರಿಕೆ ಕೂಡ ಇದೆ. ರಕ್ತಸೋರಿಕೆ ತಡೆಗಟ್ಟಲು, ಅಜೀರ್ಣ ನಿವಾರಣೆಗೆ, ಚರ್ಮ ವ್ಯಾಧಿಗೆ, ಮಧುಮೇಹ, ಸರ್ಪಸುತ್ತು, ಮೂತ್ರ ಸಂಬಂಧಿ ಕಾಯಿಲೆ ನಿವಾರಣೆಗೆ ಗರಿಕೆ ಬಳಕೆಯಾಗುತ್ತದೆ.

ಗರಿಕೆ ಹುಲ್ಲಿನ ಔಷಧಿ ಗುಣಗಳು
ಗರಿಕೆ ಹುಲ್ಲು ವಿಶೇಷ ಔಷಧಿ ಗುಣಗಳನ್ನು ಹೊಂದಿದ್ದು, ಇದನ್ನು ಸಂಜೀವಿನಿ ಎಂದು ಕರೆಯುತ್ತಾರೆ. ಹಸಿರು ರಕ್ತ ಎಂದು ಕರೆಯಲ್ಪಡುವ ಇದು, ನಮ್ಮ ರಕ್ತದಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತದೆ. ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಗರಿಕೆ ಹುಲ್ಲು ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ. ರಕ್ತದಲ್ಲಿ ಕೊಲೆಸ್ರ್ಟಾಲ್ ಪ್ರಮಾಣ ಕಡಿಮೆಮಾಡಲು, ಸುಮಾರು ಗರಿಕೆ ಹುಲ್ಲನ್ನು ತೆಗೆದುಕೊಂಡು, ಅದಕ್ಕೆ ಸಲ್ಪ ನೀರು ಬೆರಸಿ, ಮಿಕ್ಸಿಗೆ ಹಾಕಿ ರುಬ್ಬಿ, ನಂತರ ರಸವನ್ನು ಸೋಸಿಕೊಂಡು ಕುಡಿಯಬೇಕು. ಹೀಗೆ 1 ತಿಂಗಳ ಕಾಲ ಮಾಡಿದರೆ, ರಕ್ತ ಶುದ್ಧಿಗೊಂಡು, ರೋಗಗಳು ನಿವಾರಣೆಯಾಗುತ್ತವೆ.

ತಾಯಿಯ ಎದೆ ಹಾಲಿನ ಪ್ರಮಾಣ ಕಡಿಮೆಯಾದಾಗ

ತಾಯಿಯ ಎದೆ ಹಾಲಿನ ಪ್ರಮಾಣ ಕಡಿಮೆಯಾದಾಗ, ಮಗುವಿಗೆ 1 ಚಮಚ ಗರಿಕೆ ಹುಲ್ಲಿನ ರಸದ ಜೊತೆ ಜೇನು ತುಪ್ಪ ಬೆರಸಿ ಕೊಡುವುದರಿಂದ, ಮಗುವು ದಷ್ಟಪುಷ್ಟವಾಗಿ ಬೆಳೆಯುತ್ತದೆ.

ಬಿದ್ದ ಗಾಯದಿಂದ ರಕ್ತ ಸೋರುವುದನ್ನು ಗರಿಕೆ ಹುಲ್ಲಿನಿಂದ ತಡೆಯಬಹುದು
ಗರಿಕೆ ಹುಲ್ಲನ್ನು ನೀರಿನಲ್ಲಿ ತೊಳೆದು, ನುಣುಪಾಗಿ ಅರೆದು, ಅದರ ರಸವನ್ನು ಅಥವಾ ನುಣುಪಾದ ಹುಲ್ಲನ್ನು ಬಿದ್ದ ಗಾಯಕ್ಕೆ ಹಚ್ಚುವುದರಿಂದ, ರಕ್ತ ಸ್ರಾವವನ್ನು ತಡೆಯಬಹುದು.

ಉಗುರು ಸುತ್ತನ್ನು ಕಡಿಮೆ ಮಾಡಲು ಗರಿಕೆ ಹುಲ್ಲನ್ನು ಉಪಯೋಗಿಸುತ್ತಾರೆ

ಗರಿಕೆ ಹುಲ್ಲನ್ನು ಚೆನ್ನಾಗಿ ಅರೆದು, ಅದಕ್ಕೆ ಅರಿಶಿಣ ಮತ್ತು ಸುಣ್ಣವನ್ನು ಸೇರಿಸಿ, ಉಗುರು ಸುತ್ತಿಗೆ ಹಚ್ಚುವುದರಿಂದ, ಅದು ಕಡಿಮೆಯಾಗುತ್ತದ

ಶೀತ ಕಡಿಮೆ ಮಾಡಲು, ಗರಿಕೆ ಹುಲ್ಲು ಸಹಕಾರಿಯಾಗಿದೆ

ಸ್ವಲ್ಪ ತುಳಸಿ ಮತ್ತು ಸ್ವಲ್ಪ ಗರಿಕೆ ಹುಲ್ಲನ್ನು ನೀರಿಗೆ ಹಾಕಿ, ರಾತ್ರೆ ಕುದಿಸಿಡಬೇಕು. ನಂತರ ಬೆಳಿಗ್ಗೆ ನೀರನ್ನು ಸೊಸಿ ಕುಡಿಯಬೇಕು. ಹೀಗೆ 3 ದಿನಗಳ ಕಾಲ ಕುಡಿಯುವುದರಿಂದ ಶೀತ ಕಡಿಮೆಯಾಗುವುದು.

ಸಾಮಾನ್ಯ ಜ್ವರ ಕಡಿಮೆ ಮಾಡಲು ಗರಿಕೆಹುಲ್ಲು ಉಪಯುಕ್ತವಾಗಿದೆ

ಗರಿಕೆ ಹುಲ್ಲು, ತುಳಸಿ ಮತ್ತು ಒಂದೆಲಗವನ್ನು, ಬೇರು ಸಮೇತವಾಗಿ ನೀರಿಗೆ ಹಾಕಿ, ಚೆನ್ನಾಗಿ ಕುದಿಸಬೇಕು. ನಂತರ ಸ್ವಲ್ಪ ಬೆಲ್ಲ ಸೇರಿಸಿ, 2-3 ದಿನಗಳ ಕಾಲ ಕುಡಿಯುವುದರಿಂದ ಒಳ ಜ್ವರಗಳು ಕಡಿಮೆಯಾಗುತ್ತವೆ.

ಮೈಕೈ ನೋವಿಗೆ ಗರಿಕೆ ಹುಲ್ಲು ಉಪಯುಕ್ತ
ಪ್ರತಿದಿನ ಬಿಸಿ ನೀರಿಗೆ ಗರಿಕೆ ಹುಲ್ಲನ್ನು ಹಾಕಿಕೊಂಡು ಸ್ನಾನ ಮಾಡುವುದರಿಂದ, ಮೈಕೈ ನೋವು ಕಡಿಮೆಯಾಗುವುದು.

ಅಸ್ತಮಾ, ಅಲರ್ಜಿಗಳಂತಹ ರೋಗಗಳ ನಿವಾರಣೆಗೆ ಗರಿಕೆ ಹುಲ್ಲನ್ನು ಉಪಯೋಗಿಸುತ್ತಾರೆ
ಗರಿಕೆ ಹುಲ್ಲಿನ ರಸವನ್ನು, ಬೆಳಿಗ್ಗೆ ಖಾಲಿ ಹೊಟ್ಟೆಗೆ 2-3 ಚಮಚ ಸೇವಿಸುವುದರಿಂದ ಅಸ್ತಮಾ , ಅಲರ್ಜಿಗಳಂತಹ ರೋಗಗಳನ್ನು ನಿಯಂತ್ರಿಸಬಹುದು.

1.ರಕ್ತಹೀನತೆ ಮತ್ತು ಮುಟ್ಟಿನ ಹೊಟ್ಟೆ ನೋವಿಗೆ-ಒಂದು ಚಮಚ ಗರಿಕೆ ಹುಲ್ಲಿನ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ತಿಂಗಳವರೆಗೆ ಸೇವಿಸಬೇಕು.
2.ಬೆವರುಸಾಲೆಗೆ-ಗರಿಕೆ ಮತ್ತು ತುಳಸಿ ಎಲೆಯನ್ನು ಅಕ್ಕಿ ತೊಳೆದ ನೀರಿನೊಂದಿಗೆ ಅರೆದು ಮೈಗೆ ಹಚ್ಚಬೇಕು.
3.ಗಜಕರ್ಣ ಅಥವಾ ಯಾವುದೇ ಕಜ್ಜಿ-ಗರಿಕೆ ರಸಕ್ಕೆ ಅರಸಿನ ಪುಡಿ ಸೇರಿಸಿ ಹಚ್ಚುವುದು ಪರಿಣಾಮಕಾರಿ.
4.ಬಿಳಿಮುಟ್ಟು-ಗರಿಕೆ ರಸವನ್ನು ಮೊಸರಿನೊಂದಿಗೆ ಸೇವಿಸಬೇಕು.
5.ಉರಿಮೂತ್ರ ಮತ್ತು ಮೂತ್ರಕೋಶದ ಕಲ್ಲು-ಗರಿಕೆ ರಸವನ್ನು ಎಳನೀರಿನೊಂದಿಗೆ ಸೇವಿಸಬೇಕು.
6.ಉಗುರು ಸುತ್ತು-ಗರಿಕೆಯನ್ನು ಸುಣ್ಣ ಮತ್ತು ಅರಸಿನದೊಂದಿಗೆ ಅರೆದು ಬೆರಳಿನ ಸುತ್ತಲೂ ಹಚ್ಚಬೇಕು.
7.ನಿತ್ಯವೂ ಇದರ ರಸ(ಜ್ಯೂಸ್) ಸೇವಿಸುವುದು ಮಧುಮೇಹಿಗಳಿಗೆ ಹಾಗೂ ಗ್ಯಾಸ್ಟ್ರೈಟಿಸ್ ನಿಂದ ಬಳಲುವವರಿಗೆ ಪರಿಣಾಮಕಾರಿ. ಇದರ ತಂಬುಳಿಯನ್ನೂ ಮಾಡಿ ಸೇವಿಸಬಹುದು.

- Advertisement -
- Advertisement -
- Advertisement -

Latest article