ದೇಶದ ಜನತೆಗೆ ಕೊರೋನಾ ಬಗ್ಗೆ ಭಯ ಇದೆಯೋ ಇಲ್ಲವೋ, ಆದರೆ ಎರಡನೇ ಅಲೆ ಅನ್ನುವ ಶಬ್ಧ ಮಾತ್ರ ಕೊರೋನಾ ಸೋಂಕಿಗಿಂತಲೂ ಹೆಚ್ಚು ಭಯ ಹುಟ್ಟಿಸಿತ್ತು. ಸುದ್ದಿ ವಾಹಿನಿಗಳ ಬ್ರೇಕಿಂಗ್ ಪೈಪೋಟಿಯೇ ಇದಕ್ಕೆ ಕಾರಣ.
ಈ ನಡುವೆ ಕೊರೋನಾ ಸೋಂಕಿನ ಎರಡನೇ ಅಲೆ ಬಗ್ಗೆ ಆತಂಕಿತರಾಗಿರುವ ಜನತೆಗೆ ವೈದ್ಯರು ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ವೈದ್ಯರಾಗಿರುವ ಶ್ರೀನಿವಾಸ ಕಕ್ಕಿಲ್ಲಾಯ ಎರಡನೇ ಅಲೆಯ ಬಗ್ಗೆ ಭಯ ಬೇಕಾಗಿಲ್ಲ, ಮೊದಲ ಅಲೆಯಷ್ಟು ಭೀಕರವಾಗಿರುವುದಿಲ್ಲ ಅನ್ನುವ ಮಾತುಗಳನ್ನು ಹೇಳಿದ್ದರು. ಆದರೆ ಆ ಸಂದರ್ಭದಲ್ಲಿ ತುಂಬಾ ಜನ ಅದನ್ನು ಕಿವಿಗೂ ಹಾಕಿಕೊಂಡಿರಲಿಲ್ಲ, ತಲೆಗೂ ತೆಗೆದುಕೊಂಡಿರಲಿಲ್ಲ.
ಇದೀಗ ಪ್ರಸಿದ್ಧ ವೈರಾಲಜಿಸ್ಟ್ ಡಾ. ಶಹೀದ್ ಜಮೀಲ್ ದೇಶಕ್ಕೆ ಕೊರೋನಾ ಸೋಂಕಿನ ಎರಡನೇ ಅಲೆಯ ಅಪಾಯವಿಲ್ಲ ಅಂದಿದ್ದಾರೆ.
ಡಾ. ಜಮೀಲ್ ಪ್ರಕಾರ ದೇಶದಲ್ಲಿ ದಿನ ನಿತ್ಯ ಕೊರೋನಾ ಕೇಸುಗಳ ಸಂಖ್ಯೆ ಇಳಿಮುಖವಾಗುತ್ತಿದೆ.ಸಪ್ಟಂಬರ್ ಮಧ್ಯ ಭಾಗದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತುಂಬಾ ಏರಿತ್ತು. ಈಗ ಎಲ್ಲವೂ ಇಳಿಕೆಯ ಹಾದಿಯಲ್ಲಿದೆ. ನಿತ್ಯ 25 ಸಾವಿರ ಸೋಂಕಿತರು ಭಾರತದಲ್ಲಿ ಪತ್ತೆಯಾಗುತ್ತಿದ್ದು ಸಪ್ಟಂಬರ್ ತಿಂಗಳಲ್ಲಿ 93 ಸಾವಿರ ಪ್ರಕರಣಗಳು ಪತ್ತೆಯಾಗಿತ್ತು.
ಹೀಗಾಗಿ ಕೊರೋನಾ ಸೋಂಕಿನ ಕರಾಳ ದಿನಗಳು ಕಳೆದಿವೆ ಅನ್ನುವುದು ಡಾ. ಜಮೀಲ್ ಅಭಿಪ್ರಾಯ.